ಲಿಫ್ಟ್ ನಲ್ಲಿ ಸಿಲುಕಿ 26 ವರ್ಷದ ಖಾಸಗಿ ಶಾಲಾ ಶಿಕ್ಷಕಿ ಸಾವು

ಮುಂಬಯಿ : ಲಿಫ್ಟ್ ನಲ್ಲಿ ಸಿಲುಕಿ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಸಾವನ್ನಪ್ಪಿದ ಧಾರುಣ ಘಟನೆ ಮುಂಬೈ  ಮಲಾಡ್ ನ ಎಂಬಲ್ಲಿ ನಡೆದಿದೆ.

ಜೆನೆಲ್ ಫೆರ್ನಾಂಡಿಸ್ (26) ಸಾವನ್ನಪ್ಪಿದ ಶಿಕ್ಷಕಿ.

ಮುಂಬೈನಲ್ಲಿರುವ ಮಲಾಡ್‌ನ ಚಿಂಚೋಲಿ ಬಂದರ್‌ನಲ್ಲಿರುವ ಸೇಂಟ್ ಮೇರಿಸ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜೆನೆಲ್ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಎರಡನೇ ಮಹಡಿಯಲ್ಲಿರುವ ಸಿಬ್ಬಂದಿ ಕೊಠಡಿಗೆ ತೆರಳಲು ಆರನೇ ಮಹಡಿಯಿಂದ ಲಿಫ್ಟ್ ಮೂಲಕ ಬರಲು ಲಿಫ್ಟ್ ಒಳಗೆ ಪ್ರವೇಶಿಸುತ್ತಿದ್ದಂತೆ ಒಮ್ಮೆಲೆ ಬಾಗಿಲು ಮುಚ್ಚಿದೆ ಈ ವೇಳೆ ಶಿಕ್ಷಕಿ ಬಾಗಿಲಿನ ನಡುವೆ ಸಿಲುಕಿಕೊಂಡಿದ್ದಾರೆ ಅಲ್ಲದೆ ಲಿಫ್ಟ್ ಚಲಿಸಲು ಪ್ರಾರಂಭಿಸಿದೆ ಇದರಿಂದ ಗಂಭೀರ ಗಾಯಗೊಂಡಿದ್ದರು.

ಕೂಡಲೇ ಶಾಲೆಯ ಸಿಬ್ಬಂದಿಗಳು ಶಿಕ್ಷಕಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾರೆ.

Latest Indian news

Popular Stories

Social Media Auto Publish Powered By : XYZScripts.com
error: Content is protected !!