ಲೋಕಸಭಾ ಮತ್ತು ರಾಜ್ಯಸಭೆಯ ಕಲಾಪ ಅನಿರ್ದಿಷ್ಟವಧಿಗೆ ಮುಂದೂಡಿಕೆ

ದೆಹಲಿ: ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಚಳಿಗಾಲ ಅಧಿವೇಶನದ ಕಲಾಪ ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಪೂರ್ವ ನಿಗದಿಯಂತೆ ಈ ಬಾರಿಯ ಸಂಸತ್ತಿನ ಚಳಿಗಾಲ ಅಧಿವೇಶನ ನಾಳೆ ಮುಕ್ತಾಯವಾಗಬೇಕಿತ್ತು. ಅದಕ್ಕೆ ಒಂದು ದಿನ ಮೊದಲೇ ಲೋಕಸಭಾಧ್ಯಕ್ಷರು ಹಾಗೂ ರಾಜ್ಯಸಭೆಯಲ್ಲಿ ಸಭಾಪತಿಗಳು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.

ಕಳೆದ ನವೆಂಬರ್ 29ರಂದು ಚಳಿಗಾಲ ಅಧಿವೇಶನ ಆರಂಭವಾದಾಗಿನಿಂದ ಉಭಯ ಸದನಗಳಲ್ಲಿಯೂ ಫಲಪ್ರದ ಚರ್ಚೆ, ಕಲಾಪಗಳು ನಡೆಯುವುದಕ್ಕಿಂತ ವಿಪರೀತ ಗದ್ದಲ, ಕೋಲಾಹಲಗಳು ನಡೆದಿದ್ದೇ ಹೆಚ್ಚು. 12 ಮಂದಿ ಸದಸ್ಯರನ್ನು ರಾಜ್ಯಸಭೆಯಿಂದ ಅಮಾನತು ಮಾಡಿದ್ದು, ಲಖಿಂಪುರ ಖೇರಿ ಘಟನೆ ಸೇರಿದಂತೆ ಅನೇಕ ವಿಷಯಗಳು ತೀವ್ರ ಕೋಲಾಹಲವೆಬ್ಬಿಸಿದವು.

ಈ ಸಮಯದಲ್ಲಿ ಲೋಕಸಭೆಯಲ್ಲಿ ನಡೆದ ಒಟ್ಟು ಕಾರ್ಯಕಲಾಪ ಅವಧಿ, ಭಾಗವಹಿಸಿದ ಸದಸ್ಯರ ಬಗ್ಗೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮಾಹಿತಿ ನೀಡಿದ್ದಾರೆ. ಲೋಕಸಭೆಯಲ್ಲಿ ಶೇಕಡಾ 82ರಷ್ಟು ಫಲಪ್ರದ ಮಾತುಕತೆ, ಚರ್ಚೆ ನಡೆದಿವೆ.

ಲೋಕಸಭೆ: ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ 18 ದಿನಗಳ ಕಲಾಪ ನಡೆದಿತ್ತು. ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆತ ಮತ್ತು ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯಂತಹ ಪ್ರಮುಖ ಶಾಸನಗಳ ಅಂಗೀಕಾರಕ್ಕೆ ಈ ಬಾರಿ ಸದನ ಕಲಾಪ ಸಾಕ್ಷಿಯಾಯಿತು. ಬೆಲೆ ಏರಿಕೆ ಮತ್ತು ಲಖಿಂಪುರ ಖೇರಿ ಹಿಂಸಾಚಾರದಂತಹ ಹಲವಾರು ವಿಷಯಗಳ ಬಗ್ಗೆ ವಿರೋಧ ಪಕ್ಷದ ಸದಸ್ಯರು ಮಾತನಾಡಿದಾಗ ಕೇಂದ್ರ ಸರ್ಕಾರದ ಮೌನದಿಂದಾಗಿ ಹಲವು ಸಮಯ ವ್ಯರ್ಥವಾಯಿತು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಡಿಸೆಂಬರ್ 2 ರಂದು ಕೆಳಮನೆಯು ಶೇಕಡಾ 204 ರಷ್ಟು ದಾಖಲೆಯ ಚರ್ಚೆಯನ್ನು ಕಂಡಿದೆ. ಒಟ್ಟು 99 ಸಂಸದರು ಕೋವಿಡ್-19(Covid-19) ಕುರಿತು 12 ಗಂಟೆಗಳ 26 ನಿಮಿಷಗಳ ಸುದೀರ್ಘ ಚರ್ಚೆಯಲ್ಲಿ ಭಾಗವಹಿಸಿದರು, ಇದರಲ್ಲಿ ಅವರು COVID ಅವಧಿಯಲ್ಲಿ ತಮ್ಮ ಪ್ರದೇಶಗಳಲ್ಲಿ ಮಾಡಿದ ಅತ್ಯುತ್ತಮ ಕೆಲಸವನ್ನು ಸದನದೊಂದಿಗೆ ಹಂಚಿಕೊಂಡಿದ್ದಾರೆ ಎಂದು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಸದನ ಸದಸ್ಯರೊಂದಿಗೆ ಹಂಚಿಕೊಂಡರು.

Latest Indian news

Popular Stories

error: Content is protected !!