ವಶಕ್ಕೆ ಪಡೆದ ಬಿಟ್ ಕಾಯಿನ್ ಸುರಕ್ಷಿತವಾಗಿದೆ – ಪೋಲೀಸರ ಸ್ಪಷ್ಟನೆ

ಬೆಂಗಳೂರು: ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರೀ ವಾಕ್ಸಮರಗಳು ನಡೆಯುತ್ತಿದ್ದು, ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಆರೋಪಗಳಲ್ಲಿ 0.08 ಬಿಟ್ ಕಾಯಿನ್ ನಾಪತ್ತೆಯಾಗಿದೆ ಎಂಬ ಎಂಬ ಆರೋಪವೂ ಕೇಳಿ ಬಂದಿದ್ದು, ಈ ಕುರಿತು ನಗರ ಪೊಲೀಸ್ ಆಯುಕ್ತರ ಕಚೇರಿ ಗುರುವಾರ ಸ್ಪಷ್ಟನೆ ನೀಡಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದು ಎರಡನೇ ಬಾರಿ ಸ್ಪಷ್ಟನೆ ನೀಡಿದ್ದು, ವಶಕ್ಕೆ ಪಡೆಯಲಾಗಿದ್ದ ಬಿಟ್ ಕಾಯಿನ್ ಗಳು ಸುರಕ್ಷಿತವಾಗಿವೆ ಎಂದು ಹೇಳಿದೆ.

ಬಿಟ್ ಕಾಯಿನ್ ಪ್ರಕರಣ ಸಂಬಂಧ ಆರೋಪಿ ರಾಬಿನ್ ಖಂಡೇಲ್ ವಾಲಾ ವ್ಯಾಲೆಟ್ ನಿಂದ ಸರ್ಕಾರದ ಪಂಚರ ಸಮಕ್ಷಮದಲ್ಲಿ ಪೊಲೀಸ್ ವ್ಯಾಲೆಟ್ ಗೆ ಬಿಟ್ ಕಾಯಿನ್ ವರ್ಗಾಯಿಸಲಾಗಿಯಿತು. ಒಟ್ಟು 2,50,438 ಮೌಲ್ಯದ ಬಿಟ್ ಕಾಯಿನ್ ಪೊಲೀಸ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಈ ಬಗ್ಗೆ ಪಂಚನಾಮೆ ಕೂಡ ಆಗಿದ್ದು, ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಕೂಡ ಲಗತ್ತಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಯುನೋಕಾಯಿನ್ ಎಂಬುದು ಕ್ರಿಫ್ಟೋ ಕರೆನ್ಸಿಯಲ್ಲ, ಅದೊಂದು ಒಂದು ಬಿಟ್ ಕಾಯಿನ್ ಎಕ್ಸ್‌ಚೇಂಜ್ ಕಂಪನಿ. ಭಾರತದಲ್ಲಿ ಬಿಟ್ ಕಾಯಿನ್ ಎಕ್ಸ್ ಚೇಂಜ್ ವ್ಯವಹಾರ ನಡೆಯುವ ಕೆಲವೇ ಸಂಸ್ಥೆಗಳಲ್ಲಿ ಯೂನೋ ಬಿಟ್ ಕಾಯಿನ್ ಕಂಪನಿ ಕೂಡ ಒಂದಾಗಿದ್ದು, ಅದೂ ಬೆಂಗಳೂರಿನಿಂದಲೇ ವಹಿವಾಟು ನಡೆಸುತ್ತಿದೆ ಈ ಪ್ರಕರಣದಲ್ಲಿ ಆ ಕಂಪನಿ ಸಂತ್ರಸ್ತ ಕಂಪನಿಯಾಗಿದೆಯೇ ಹೊರತು ಆರೋಪಿಯಲ್ಲ. ತನಿಖೆಗೆ ತಾಂತ್ರಿಕ ನೆರವನ್ನು ಯೂವನೋ ಕಂಪನಿ ನೀಡಿದೆ ಎಂದು ಸ್ಪಷ್ಟಡಿಸಿದೆ.

ಬಿಟ್ ಕಾಯಿನ್ ಹಗರಣ ಸಂಬಂಧ ಖಂಡೇವಾಲಾ ವ್ಯಾಲೆಟ್ ನಿಂದ ಜಪ್ತಿಯಾದ ಬಿಟ್ ಕಾಯಿನ್ ನಾಪತ್ತೆಯಾಗಿದೆ ಎಂದು ಪ್ರಿಯಾಂಕ ಖರ್ಗೆ ಈ ಹಿಂದೆ ಆರೋಪಿಸಿದ್ದರು.

Latest Indian news

Popular Stories

error: Content is protected !!