ವಿಗ್ರಹ ಕ್ರೇನ್ ನಿಂದ ಕೆಳಗೆ ಬಿದ್ದು ನಾಲ್ಕು ಭಕ್ತರ ಮೃತ್ಯು

ಚೆನ್ನೈ: ಊರ ಜಾತ್ರೆಯ ವೇಳೆ ದೇವರ ವಿಗ್ರಹವನ್ನು ಹೊತ್ತುಕೊಂಡು ಹೋದ ಕ್ರೇನ್‌ ಕೆಳಗೆ ಬಿದ್ದು ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಅರಕ್ಕೋಣಂ ಸಮೀಪದ ನೆಮಿಲಿಯ ಕಿಲ್ವೀಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ( ಜ.22 ರಂದು) ನಡೆದಿದೆ.

ಊರ ಜಾತ್ರೆಯ ಪ್ರಯುಕ್ತ ದೇವತೆಯ ವಿಗ್ರಹವನ್ನು ಕ್ರೇನ್‌ ಮೂಲಕ ಗ್ರಾಮದಲ್ಲಿ ಹೊತ್ತುಕೊಂಡು ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆ ನೋಡಲು ಸಾವಿರಾರು ಭಕ್ತರು ನೆರವೇರಿದ್ದಾರೆ. 25 ಅಡಿ ಎತ್ತರದಲ್ಲಿ ದೇವತೆಯನ್ನು ಕಂಡು ಜನರ ಪುಳಕಿತಗೊಂಡಿದ್ದಾರೆ.

ದೇವರನ್ನು ಅಲಂಕರಿಸಲು ಎಂಟು ಜನ ಕ್ರೇನ್‌ ಮೇಲೆಯೇ ವಿಗ್ರಹದ ಪಕ್ಕದಲ್ಲಿದ್ದರು. ಭಕ್ತರಿಂದ ಬರುವ ಹೂಮಾಲೆಯನ್ನು ದೇವರಿಗೆ ಸಮರ್ಪಿಸುತ್ತಿದ್ದರು. ಇದೇ ವೇಳೆ ಎಂಟು ಜನರ ಭಾರದಿಂದ ಕ್ರೇನ್‌ ಒಂದು ಕಡೆ ವಾಲಿ ಏಕಾಏಕಿ ಬಿದ್ದಿದೆ. ನೆರೆದಿದ್ದ ಜನರೆಲ್ಲಾ ಅತ್ತಿತ್ತ ಓಡಿ ಜೀವ ಉಳಿಸಿಕೊಂಡಿದ್ದಾರೆ.

ಘಟನೆಯಲ್ಲಿ ಕೆ.ಮುತ್ತುಕುಮಾರ್(39), ಎಸ್.ಭೂಪಾಲನ್ (40), ಮತ್ತು ಬಿ.ಜೋತಿಬಾಬು (17) ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಉಳಿದವರಿಗೆ ಗಾಯಗಳಾಗಿವೆ. ಮೆರವಣಿಗೆ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ವಿಡಿಯೋ ಮಾಡುತ್ತಿದ್ದ ಕಾರಣ, ಈ ಭೀಕರ ದೃಶ್ಯ ಮೊಬೈಲ್‌ ನಲ್ಲಿ ಸೆರೆಯಾಗಿದೆ.

Latest Indian news

Popular Stories