ವಿಜಯಪುರ: 95 ಅಭ್ಯರ್ಥಿಗಳ ಭವಿಷ್ಯ ಬರೆಯಲಿರುವ ಮತದಾರ

95 ಅಭ್ಯರ್ಥಿಗಳ ಭವಿಷ್ಯ ಬರೆಯಲಿರುವ ಮತದಾರ

ವಿಜಯಪುರ : ವಿಜಯಪುರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಚುನಾವಣೆ ನಡೆಯಲಿದ್ದು, 95 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ನಾಳೆ ಬರೆಯಲಿದ್ದಾನೆ.

ಮತದಾರರ ಮನಗೆಲ್ಲಲು ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕೊನೆಯ ಹಂತದ ಕಸರತ್ತು ನಡೆಸಿವೆ. ಅಂತಿಮವಾಗಿ ಮತದಾರ ನಾಳೆ ತನ್ನ ನಿರ್ಧಾರವನ್ನು ಇವಿಎಂ ಮಷೀನ್‌ನಲ್ಲಿ ಭದ್ರಪಡಿಸಲಿದ್ದಾನೆ.

ಚುನಾವಣೆ ಘೋಷಣೆಯಾದ ದಿನದಿಂದಲೂ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು. ಬಹಿರಂಗ ಅಧಿವೇಶನ, ಪಾದಯಾತೆ, ಮನೆ-ಮನೆಗೆ ತೆರಳಿ ಮತಯಾಚನೆ, ವಿರೋಧಿ ಗುಂಪುಗಳ ಮನವೊಲಿಸುವಿಕೆ ಹೀಗೆ ನಾನಾ ರೀತಿಯಲ್ಲಿ ಚುನಾವಣೆಯ ರಂಗು ಎಲ್ಲೆಡೆ ಮೂಡಿತ್ತು.

ಬೆಳಿಗ್ಗೆ ಆಯಾ ರಾಜಕೀಯ ಪಕ್ಷಗಳ ಸಂಪರ್ಕ ಕಾರ್ಯಾಲಯದ ಮುಂದೆ ಕಾರ್ಯಕರ್ತರ ದಂಡು, ಜಯಘೋಷ ಎಲ್ಲೆಡೆ ಮೊಳಗಿತ್ತು. ಇನ್ನೂ ಮತದಾನಕ್ಕೆ 24 ಗಂಟೆ ಮಾತ್ರ ಬಾಕಿ ಉಳಿದಿರುವುದರಿಂದ ಮತದಾರರನ್ನು ಮತಗಟ್ಟೆ ಕೇಂದ್ರಕ್ಕೆ ಕರೆತರುವ ನಿಟ್ಟಿನಲ್ಲಿ `ಪರೋಕ್ಷ’ ಕಾರ್ಯತಂತ್ರದಲ್ಲಿ ಎಲ್ಲರೂ ತಲ್ಲೀನರಾಗಿದ್ದಾರೆ.

18,92,852 ಮತದಾರರು
ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ 40 ಸಖಿ ಮತಗಟ್ಟೆ, 8 ವಿಶೇಷಚೇತನರ ಮತಗಟ್ಟೆ, 8 ಯುವ ಮತದಾರರ ಮತಗಟ್ಟೆ ಹಾಗೂ 8 ವಿಷಯಾಧಾರಿತ ಮತಗಟ್ಟೆೆ ಒಟ್ಟು 2072 ಹಾಗೂ 6 ಹೆಚ್ಚುವರಿ ಸೇರಿದಂತೆ 2078 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಾದ್ಯಂತ 9,66,535 ಪುರುಷ, 9,26,096 ಮಹಿಳಾ ಮತದಾರರು ಹಾಗೂ 221 ಇತರೆ ಮತದಾರರು ಸೇರಿದಂತೆ 18,92,852 ಮತದಾರರು ಮತಚಲಾಯಿಸುವ ಅರ್ಹತೆ ಪಡೆದುಕೊಂಡಿದ್ದಾರೆ.

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 1,10,091 ಪುರುಷ, 1,06,897 ಮಹಿಳಾ, 21 ಇತರೆ ಸೇರಿದಂತೆ 2,17,009 ಮತದಾರರಿದ್ದಾರೆ. ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 1,10,091 ಪುರುಷ, 1,06,402 ಮಹಿಳಾ, 20 ಇತರೆ ಸೇರಿದಂತೆ 2,19,131 ಮತದಾರರಿದ್ದಾರೆ.

ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 1,07,003 ಪುರುಷ, 1,02,799 ಮಹಿಳಾ, 12 ಇತರೆ ಸೇರಿದಂತೆ 2,09,814 ಮತದಾರರಿದ್ದಾರೆ. ಬಬಲೇಶ್ವರ ಮತಕ್ಷೇತ್ರದಲ್ಲಿ 1,10,801 ಪುರುಷ, 1,06,346 ಮಹಿಳಾ, 4 ಇತರೆ ಸೇರಿದಂತೆ 2,17,151 ಮತದಾರರಿದ್ದಾರೆ.

ವಿಜಯಪುರ ನಗರ ಮತಕ್ಷೇತ್ರದಲ್ಲಿ 1,39,699 ಪುರುಷ, 1,41,826 ಮಹಿಳಾ, 93 ಇತರೆ ಸೇರಿದಂತೆ 2,81,618 ಮತದಾರರಿದ್ದಾರೆ. ನಾಗಠಾಣ ಮತಕ್ಷೇತ್ರದಲ್ಲಿ 1,38,473 ಪುರುಷ, 1,30,647 ಮಹಿಳಾ, 22 ಇತರೆ ಸೇರಿದಂತೆ 2,69,142 ಮತದಾರರಿದ್ದಾರೆ. ಇಂಡಿ ಮತಕ್ಷೇತ್ರದಲ್ಲಿ 1,25,592 ಪುರುಷ, 1,16,855 ಮಹಿಳಾ, 19 ಇತರೆ ಸೇರಿದಂತೆ 2,42,466 ಮತದಾರರು ಹಾಗೂ 33-ಸಿಂದಗಿ ಮತಕ್ಷೇತ್ರದಲ್ಲಿ 1,22,167 ಪುರುಷ, 1,14,324 ಮಹಿಳಾ, 30 ಇತರೆ ಸೇರಿದಂತೆ 2,36,521 ಮತದಾರರಿದ್ದು, ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 18,92,852 ಮತದಾರರಿದ್ದಾರೆ. ಅದರಂತೆ ಜಿಲ್ಲೆಯಲ್ಲಿರುವ 1851 ಸೇವಾ ಮತದಾರರಿಗೆ ಈಗಾಗಲೇ ಇಟಿಪಿಬಿಎಸ್ ಮೂಲಕ ಅಂಚೆ ಮತಪತ್ರ ಕಳುಹಿಸಲಾಗಿದೆ ಎಂದು ಹೇಳಿದರು.

ಕಣದಲ್ಲಿ 95 ಅಭ್ಯರ್ಥಿಗಳು
ದೇವರ ಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದಿಂದ ಬಸಲಿಂಗಪ್ಪ ಉರ್ಫ ಬಸಲಿಂಗಪ್ಪಗೌಡ ತಂದೆ ಬಸವಂತರಾಯ ಇಂಗಳಗಿ, ಭೀಮನಗೌಡ ಪಾಟೀಲ (ರಾಜುಗೌಡ) ಬಸನಗೌಡ ಪಾಟೀಲ, ರಾಜು ಮಾದರ (ಗುಬ್ಬೇವಾಡ), ಸುಣಗಾರ ಶರಣಪ್ಪ ತಿಪ್ಪಣ್ಣ, ಸೋಮನಗೌಡ ಬ. ಪಾಟೀಲ ಸಾಸನೂರ, ಗುರುಶಾಂತವೀರ ಸ್ವಾಮಿಜಿ ಹಿರೇಮಠ ಇಟಗಿ, ಬೇವಿನಕಟ್ಟಿ ಗೈಬಪ್ಪ ಭೀಮಪ್ಪ, ಮನಸೂರಬಾಬ ನಬಿಸಾಹೇಬ ಬೀಳಗಿ, ಶಿವಾನಂದ ಯಡಹಳ್ಳಿ (ಕೊಂಡಗೂಳಿ), ದುಂಡಸಿ ಅಬ್ದುಲರಹಿಮಾನ ಮಹ್ಮದಹನೀಫ್, ಕೆಂಪೇಗೌಡ ಈರಣಗೌಡ ಕೇಶಪ್ಪಗೋಳ, ಭೀಮನಗೌಡ ಬಸನಗೌಡ ಪಾಟೀಲ ಹಾಗೂ ಶ್ರೀಶೈಲ ರುದ್ರಪ್ಪ ಕಕ್ಕಳಮೇಲಿ ಕಣದಲ್ಲಿದ್ದಾರೆ.

ಬಸವನ ಬಾಗೇವಾಡಿ ಕ್ಷೇತ್ರದಿಂದ ಗುರುಬಸಪ್ಪ ಬಸಪ್ಪ ಢವಳಗಿ, ಶಿವಾನಂದ ಪಾಟೀಲ, ಅಪ್ಪುಗೌಡ ಉರ್ಫ ಸೋಮನಗೌಡ ಬಸನಗೌಡ ಪಾಟೀಲ, ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ, ಅಲ್ಲಾಬಕ್ಷ ಬಿಜಾಪುರ, ಜಮೀರಅಹ್ಮದ ಇನಾಂದಾರ, ನಾರಾಯಣ ನೀಲಕಂಠ ರಾಠೋಡ, ಪ್ರವೀಣಕುಮಾರ ರಾಯಗೊಂಡ (ಮುತ್ತಗಿ), ಅವಟಿ ಶಂಕರೆಪ್ಪ ಕಾಶೀನಾಥ, ರಾಜೇಶ್ವರಿ ರಾಜಶೇಖರ ಯರನಾಳ, ಲಕ್ಷಿಂಬಾಯಿ ಎಸ್.ಜಿ.ಪಾಟೀಲ ಹಾಗೂ ಸಂಗಪ್ಪ ಚಂದು ಲಮಾಣಿ ಇವರ ಭವಿಷ್ಯ ಇಂದು ಭದ್ರ ಪಡಿಸಲಿದ್ದಾನೆ.

ಇಂಡಿ ವಿಧಾನಸಭಾ ಕ್ಷೇತ್ರದಿಂದ ಕಾಸುಗೌಡ ಈರಪ್ಪಗೌಡ ಬಿರಾದಾರ, ಗೋಪಾಲ ಆರ್. ಪಾಟೀಲ, ನಾಗೇಶ ಶಿವಶರಣ, ಬಿ.ಡಿ.ಪಾಟೀಲ (ಹಂಜಗಿ), ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ, ಅಶೋಕ ಜಾಧವ, ಕವಿತಾ ಕಟಕದೊಂಡ, ಎಂ.ಎಂ. ಬಾಗವಾನ ಹಾಗೂ ಗೊಲ್ಲಾಳ ನಿಂಗನಗೌಡ ಜ್ಯೊತಿಗೊಂಡ ಇವರ ಭವಿಷ್ಯ ಮತದಾರ ನಾಳೆ ಭದ್ರ ಪಡಿಸಲಿದ್ದಾನೆ.

ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ ಅಪ್ಪಾಜಿ ಅಲಿಯಾಸ ಚನ್ನಬಸವರಾಜ ನಾಡಗೌಡ, ಎ.ಎಸ್. ಪಾಟೀಲ ನಡಹಳ್ಳಿ, ಕೆ.ಬಿ.ದೊಡಮನಿ, ಬಸವರಾಜ ಭೀಮಣ್ಣ ಭಜಂತ್ರಿ, ಮೆಹಬೂಬ ಶಬ್ಬೀರಅಹ್ಮದ ಹಡಲಗೇರಿ, ಜಾಕೀರ ಹುಸೇನ್ ಉಸ್ಮಾನ ಲಾಹೋರಿ, ದೀಪಾ ಮಹಾಂತಪ್ಪ ಮಣೂgಹಾಗೂ ರಾಮನಗೌಡ ಎಸ್. ಬಾಳವಾಡ ಕಣದಲ್ಲಿದ್ದಾರೆ.

ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಅಶೋಕ ಮಲ್ಲಪ್ಪ ಮನಗೂಳಿ, ಡಾ. ದಸ್ತಗೀರ ಮುಲ್ಲಾ, ಭೂಸನೂರ ರಮೇಶ ಬಾಳಪ್ಪ, ಮುರಿಗೆಪ್ಪಗೌಡ ಸಿ.ರದ್ದೇವಾಡಗಿ, ವಿಶಾಲಾಕ್ಷಿ ಶಿವಾನಂದ ಪಾಟೀಲ, ಪುಂಡಲೀಕ ಬಿರಾದಾರ, ಜೀಲಾನಿ ಗುಡುಸಾಬ ಮುಲ್ಲಾ, ದೀಪಿಕಾ ಎಸ್. ಹಾಗೂ ಮೊಹಮ್ಮದ ಮುಶ್ತಾಕ ಅಮೀನೋದ್ದಿನ ನಾಯ್ಕೊಡಿ ಕಣದಲ್ಲಿದ್ದಾರೆ.

ನಾಗಠಾಣ ವಿಧಾನಸಭಾ ಮತಕ್ಷೇತ್ರದಲ್ಲಿ ಕಲ್ಲಪ್ಪ ತೊರವಿ, ಗುರು ಮುನ್ನು ಚವ್ಹಾಣ, ದೇವಾನಂದ ಫೂಲಸಿಂಗ್ ಚವ್ಹಾಣ, ಕಟಕಧೋಂಡ ವಿಠ್ಠಲ ಧೋಂಡಿಬಾ, ಸಂಜೀವ ಮಳಸಿದ್ದಪ್ಪ ಐಹೊಳೆ, ಕಟಕಧೋಂಡ ಕವಿತಾ ವ್ಹಿ.ಡಿ., ಕುಲಪ್ಪ ಭೀಮು ಚವ್ಹಾಣ, ಭಾರತಿ ಕಾಲೇಬಾಗ, ವಿಕ್ರಮ ವಾಗೋಮೋರೆ (ಜಿಗಜೇವಣಿ)., ವ್ಹಿ.ಡಿ. ಕಟಕಧೋಂಡ, ಬಂಡಿ ಶ್ರೀಕಾಂತ ಹಣಮಂತಪ್ಪ, ಅರುಣಾ ಗಂ. ಕಟಕಧೋಂಡ, ಶಂಕರ ಚವ್ಹಾಣ, ಸುನೀಲ ಚವ್ಹಾಣ ಹಾಗೂ ಸಂಜೀವ ಪುಂಡಲೀಕ ಮಾನೆ ಇವರ ಭವಿಷ್ಯ ನಾಳೆ ಭದ್ರವಾಗಲಿದೆ.

ವಿಜಯಪುರ ನಗರ ಕ್ಷೇತ್ರದಿಂದ ಅಬ್ದುಲ ಹಮೀದ ಖಾಜಾಸಾಬ ಮುಶ್ರೀಫ್, ಬಸನಗೌಡ ರಾ. ಪಾಟೀಲ (ಯತ್ನಾಳ), ಬಂದೇನವಾಜ ಹುಸೇನಸಾಬ ಮಹಾಬರಿ, ಕೆಂಗನಾಳ ಮಲ್ಲಿಕಾರ್ಜುನ ಭೀಮಪ್ಪ, ಹಾಸಿಂಪಿರ ಈ. ವಾಲಿಕಾರ, ಮಲ್ಲಿಕಾರ್ಜುನ ಎಚ್.ಟಿ., ರಾಕೇಶ ಇಂಗಳಗಿ (ಹಾಲಹಳ್ಳಿ), ಸತೀಶ ಅಶೋಕ ಪಾಟೀಲ, ಈರಪ್ಪಾ ಕುಂಬಾರ, ಕಡೇಚೂರ ಕಲ್ಲಪ್ಪ ರೇವಣಸಿದ್ದಪ್ಪ, ಚಂದ್ರಗಿರಿ ಹೊನ್ನದ, ಮೋತಿರಾಮ ಧರ್ಮು ಚವ್ಹಾಣ, ಮೋದಿನಸಾಬ ಬಂದಗಿಸಾಬ ಅಂಕಲಗಿ ಹಾಗೂ ರಾಜು ಯಲ್ಲಪ್ಪ ಪವಾರ ಕಣದಲ್ಲಿದ್ದಾರೆ. ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಗಂಗನಳ್ಳಿ ಕಾಮಣ್ಣ ಸಿದ್ದಪ್ಪ, ಬಸವರಾಜ ಹೊನವಾಡ, ಎಂ.ಬಿ.ಪಾಟೀಲ, ಮೆಹಬೂಬ ಮಲಬೋಡಿ, ವಿಜಯಕುಮಾರ (ವಿಜಯಗೌಡ) ಪಾಟೀಲ, ರವಿಚಂದ್ರ ತಮ್ಮಣ್ಣ ಡೊಂಬಾಳಿ, ಎಸ್.ಎಂ.ಗಾಂಜಿ (ಉಪ್ಪಾರ), ಸುನೀಲ ರಾಠೋಡ, ದುಂಡಸಿ ಅಬ್ದುಲರಹಿಮಾನ ಮಹ್ಮದಹನೀಫ್, ಜ್ಯೋತಿಬಾ ಸಾಳುಂಕೆ, ತಳೇವಾಡ ಪಾಟೀಲ, ಭೀರಪ್ಪ ಮಾಳಪ್ಪ ಸೋಡ್ಡಿ, ಮೋತಿರಾಮ ಧರ್ಮು ಚವ್ಹಾಣ, ಮಂಜುಳಾ ಕಿಶನ ಚವ್ಹಾಣ ಕಣದಲ್ಲಿದ್ದಾರೆ.

Latest Indian news

Popular Stories