ವಿಟ್ಲ: 10ನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ವಿಟ್ಲ: 10ನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಳಿಕೆ ಗ್ರಾಮದ ನೆಕ್ಕಿತಪುಣಿ ಎಂಬಲ್ಲಿ ನಡೆದಿದೆ

ಅಳಿಕೆ ಗ್ರಾಮದ ನೆಕ್ಕಿತಪುಣಿ ನಿವಾಸಿ ಸವರ್ ಡಿ ಸೋಜ ಅವರ ಪುತ್ರ ಸಂದೀಪ್ ಅನಿಸಿತ್ ಡಿಸೋಜ(15) ಆತ್ಮಹತ್ಯೆಗೆ ಶರಣಾದ ಬಾಲಕ.
ಈತ 10ನೇ ತರಗತಿ ಕಲಿಯುತ್ತಿದ್ದು, ಸರಿಯಾಗಿ ಶಾಲೆ ಹೋಗುತ್ತಿರಲಿಲ್ಲ. ನಿನ್ನೆ ರಾತ್ರಿ ಕೋಣೆಯಲ್ಲಿ ಮಲಗಿದ್ದ ಈತ ಬೆಳಿಗ್ಗೆ ಮನೆಯವರು ನೋಡಿದಾಗ ಮೃತದೇಹ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Latest Indian news

Popular Stories

error: Content is protected !!