ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್ ಪತ್ತೆ ಪ್ರಕರಣ; ಕಾರಣ ಕೇಳಿ ನೋಟಿಸ್ ಜಾರಿ

ವಿಜಯಪುರ : ಬೆಂಗಳೂರಿನ ಖಾಸಗಿ ಶಾಲೆ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ‌ ಕಾಂಡೋಮ್, ತಂಬಾಕು ಪತ್ತೆಯಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈಗಾಗಲೇ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಇನ್ನೂ ಕಾಂಡಮ್ಸ್ ನೀಡಿದ ಮೆಡಿಕಲ್ ಸ್ಟೋರ್‌ಗೂ ಸದ್ಯದಲ್ಲಿ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ಸೂಕ್ತ ಉತ್ತರ ನೀಡದಿದ್ದರೆ ಅಂಗಡಿ ಲೈಸನ್ಸ್ ರದ್ದು ಪಡಿಸಲಾಗುವುದು ಎಂದು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಸಮಜಾಯಿಸಿ‌ ನೀಡಿದರು.

ಇಂದು ವಿಜಯಪುರ ‌ಜಿಲ್ಲೆಗೆ ಆಗಮಿಸಿದ್ದ ಅವರು ಸಂಬಂಧ ಇಲಾಖೆ ಅಧಿಕಾರಿಗಳು, ಎಜಿಓ‌ಗಳ ಜತೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಬೆಂಗಳೂರಿನ ಖಾಸಗಿ ಶಾಲೆಯ ಕೆಲ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಅವರ ವಯಸ್ಸು ಮೀರಿದ ಉಪಕರ ಣಗಳು ದೊರೆತಿ ರುವದು, ಆತಂಕ ಮೂಡಿಸಿದೆ.‌ ಇವರಲ್ಲಿ‌ ಲೈಂಗಿಕ‌ ಆಸಕ್ತಿ ತೋರಿಸುತ್ತಿದೆ.

ಮೆಡಿಕಲ್ ಶಾಪ್ ನವರು ತಮ್ಮ ಬಿಜಿನೆಸ್ ಹೆಚ್ಚಿಸಿ ಕೊಳ್ಳಲು 18 ವರ್ಷದ ಒಳಗಿನ ಬಾಲಕರಿಗೆ ಕಾಂಡೋಮ್ಸ್, ತಂಬಾಕು ಸರಬರಾಜು‌ ಮಾಡಿದ್ದಾರೆ.‌ ಇದು ದೊಡ್ಡ ಅಪರಾಧ ವಾಗಿದೆ.‌ ಈಗಾಗಲೇ ಸಂಬಂಧಪಟ್ಟ ಶಾಲೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಅವರಿಂದ ಉತ್ತರ ಬರಬೇಕಾಗಿದೆ. ಇದರ ಜತೆ ಕಾಂಡೋಮ್ಸ್ ಸರಬರಾಜು‌ ಮಾಡಿದ ಮೆಡಿಕಲ್ ಶಾಪ್ ಗೆ ಶೀಘ್ರ ನೋಟಿಸ್ ಜಾರಿ ಮಾಡಲಾಗುವದು, ಅವರಿಂದ ತಪ್ಪು ಆಗಿದ್ದರೆ, ಅವರ ಲೈಸನ್ಸ್ ರದ್ದು ಸಹ ಮಾಡಲಾಗುವದು ಎಂದರು.‌

18 ವರ್ಷದವರಿಗೆ ಮದ್ಯ‌ ನೀಡಬಾರದು; ಮೊದಲು 21ವರ್ಷ ಮೇಲ್ಪಟ್ಟವರಿಗೆ ಮದ್ಯ ದಂಗಡಿ ಪ್ರವೇಶ ಹಾಗೂ ಪಾರ್ಸಲ್ ತೆಗೆದು ಕೊಂಡು ಹೋಗಲು ಅವಕಾಶ ಕಲ್ಪಿಸ ಲಾಗಿತ್ತು. ಆದರೆ ರಾಜ್ಯ ಸರ್ಕಾರ 18 ವರ್ಷ ಆದವರಿಗೆ ಮದ್ಯ ದಂಗಡಿ ಪ್ರವೇಶ ಹಾಗೂ ಪಾರ್ಸಲ್ ಗೆ ಅವಕಾಶ ನೀಡಿರುವದನ್ನುಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಅವೈಜ್ಞಾನಿಕ ನಿರ್ಧಾರವಾಗಿದೆ. ಈ ಮೂಲಕ ಯುವಕರಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ. ಈ ಬಗ್ಗೆ ಸರ್ಕಾರದ ಜತೆ ಮಾತನಾಡುವೆ.‌ತಕ್ಷಣ ಮದ್ಯಪಾನ ವಿಚಾರವಾಗಿ ಕೈಗೊಂಡ ನಿರ್ಣಯ ಹಿಂದಕ್ಕೆ ಪಡೆಯುವಂತೆ ಒತ್ತಾಯಿ ಸಲಾಗುವದು ಎಂದರು.‌

ಹೊಸ ಆ್ಯಪ್ ಸೃಷ್ಟಿ: ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಕೆಯಿಂದ ಹಾಳಾಗುತ್ತಿದ್ದಾರೆ. ಪೋಷಕರು ಸಹ ಮಕ್ಕಳಿಗೆ ಮೊಬೈಲ್ ನೀಡಿ ತಾವು ನೆಮ್ಮದಿಯಾಗಿರಲು ಬಯಸುತ್ತಾರೆ. ಅದೇ ಮೊಬೈಲ್ ನಿಂದ ಮಕ್ಕಳು ನೋಸಬಾರದ ದೃಶ್ಯ ನೋಡಿ ಹಾಳಾಗುತ್ತಾರೆ. ಅವರನ್ನು ನಿಯಂತ್ರಣಕ್ಕೆ ತರಲು ಮೊಬೈಲ್ ಆ್ಯಪ್ ಟಚ್ ಸ್ಕ್ರೀನ್ ಬದಲಿಗೆ ಪಿಂಗರ್ ಕ್ರೀಸ್ ಇರಬೇಕು ಎನ್ನುವದು ತಮ್ಮ ಅಭಿಪ್ರಾಯವಾಗಿದೆ. ಅದಕ್ಕೆ ತಕ್ಕಂತೆ ಮೊಬೈಲ್ ಆ್ಯಪ್ ತಯಾರಿಸಬೇಕಾಗಿದೆ.‌ ಈ ಬಗ್ಗೆ ಸಾಪ್ಟವೇರ್ ಕಂಪನಿಗಳ ಜತೆ ಮಾತುಕತೆ ನಡೆದಿದೆ. ಕೆಲ ಮೊಬೈಲ್ ಗಳು ಮಕ್ಕಳ ಉಪಯೋಗಕ್ಕೆ ಇರಬೇಕು. ಅವರು ಕೇವಲ ಎಜುಕೇಶನ್ ಪರವಾಗಿರುವ ಮೊಬೈಲ್ ಇದ್ದರೆ, ಅದನ್ನು ಪ್ರಾಯೋಗಿಕವಾಗಿ ರಾಜ್ಯದಲ್ಲಿ ಜಾರಿ ಮಾಡುವ ಚಿಂತನೆ ಇದೆ ಎಂದು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಅಭಿಪ್ರಾಯ ಪಟ್ಟರು.

ಪಠ್ಯದಲ್ಲಿ‌ ಲೈಂಗಿಕ ಶಿಕ್ಷಣ: ಶಿಕ್ಷಣ ಸಂಸ್ಥೆಯಲ್ಲಿ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಬೋಧಿಸುವದು ಇಂದಿನ ಅವಶ್ಯಕವಾಗಿದೆ. ಮಕ್ಕಳಿಗೆ‌ ಟಿನೇಜ್‌ನಲ್ಲಿ ಲೈಂಗಿಕ ಶಿಕ್ಷಣ ನೀಡಿದರೆ ಅವರು ದಾರಿ ತಪ್ಪುವದಿಲ್ಲ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ಪ್ರಗತಿ ಪರಿಶೀಲನಾ ಸಭೆ: ಇದಕ್ಕೂ ಮುನ್ನ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣಗೌಡ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.‌ ಸಭೆಯಲ್ಲಿ ಮುಖ್ಯವಾಗಿ ಅಂಗನವಾಡಿ ಕಾರ್ಯಕರ್ತೆಯರು ಹಿರಿಯ ಅಧಿಕಾರಿಗಳ ಜತೆ ನಡೆದುಕೊಳ್ಳುವ ರೀತಿ ಕುರಿತು ಸುದೀರ್ಘ ಚರ್ಚೆ ನಡೆಯಿತು. ಇದರ ಜತೆ ಸರ್ಕಾರಿ ಶಾಲೆಯಲ್ಲಿ‌ ಕಂಪೌಂಅ ನಿರ್ಮಾಣ, ಬಾಲಕಿಯರಿಗೆ ಶೌಚಾಲಯ ನಿರ್ಮಾಣ ಕುರಿತು ಚರ್ಚೆ ನಡೆಯಿತು.‌ ಇದರ ಜತೆ ಬಾಲ್ಯ ವಿವಾಹ ವಿಜಯಪುರ ಜಿಲ್ಲೆಯಲ್ಲಿ‌ ನಿಯಂತ್ರಣದಲ್ಲಿದ್ದು ಕಾಲ ಕಾಲಕ್ಕೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಲಾಯಿತು.

Latest Indian news

Popular Stories