ವಿಧಾನ ಪರಿಷತ್ ಚುನಾವಣೆ: ಮೇಲ್ಮನೆಯಲ್ಲಿ ಬಹುಮತ ಪಡೆದ ಬಿಜೆಪಿ, ಹೇಗಿದೆ ಮೂರು ಪಕ್ಷಗಳ ಬಲಾಬಲ

ಬೆಂಗಳೂರು: ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದ 25 ಸ್ಥಾನಗಳ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಜಿದ್ದಾಜಿದ್ದಿನ ಫೈಟ್ ನಲ್ಲಿ ಬಿಜೆಪಿ 12, ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದರೆ, ಜೆಡಿಎಸ್ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿದೆ. ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಯವರು ಗೆದ್ದು ಬಿಜೆಪಿಗೆ ಅಚ್ಚರಿ ಮೂಡಿಸಿದ್ದಾರೆ.

ಇಂದಿನ 12 ಸ್ಥಾನಗಳ ಗೆಲುವಿನೊಂದಿಗೆ ಬಿಜೆಪಿ ವಿಧಾನ ಪರಿಷತ್ ನಲ್ಲಿ ಬಹುಮತ ಪಡೆದಿದೆ. 75 ಸದಸ್ಯಬಲದ ಮೇಲ್ಮನೆಯಲ್ಲಿ 38 ಮ್ಯಾಜಿಕ್ ನಂಬರ್ ಆಗಿದೆ. ಇಂದಿನ ಫಲಿತಾಂಶದ ಬಳಿಕ ಬಿಜೆಪಿ ಸರಿಯಾಗಿ 38 ಸ್ಥಾನಗಳನ್ನು ಪಡೆದಿದೆ.

ಈ ಹಿಂದೆ 29 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ನಿಂದ 14 ಮಂದಿ ಸದಸ್ಯರು ಚುನಾವಣೆಯಲ್ಲಿದ್ದರು. ಇದೀಗ ಅದರಲ್ಲಿ 11 ಮಂದಿ ಗೆಲುವು ಕಂಡಿದ್ದು, ಪರಿಷತ್ ನಲ್ಲಿ ಕಾಂಗ್ರೆಸ್ ಬಲ 29ಕ್ಕೆ ಇಳಿಕೆಯಾಗಿದೆ.

12 ಸದಸ್ಯರನ್ನು ಹೊಂದಿದ್ದ ಜೆಡಿಎಸ್ ನಿಂದ ನಾಲ್ಕು ಮಂದಿ ಸದಸ್ಯರು ಚುನಾವಣಾ ಕಣದಲ್ಲಿದ್ದು, ಇದೀಗ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹೀಗಾಗಿ ಜೆಡಿಎಸ್ ನ ಸದಸ್ಯ ಬಲ 9ಕ್ಕೆ ಬಂದು ನಿಂತಿದೆ.

Latest Indian news

Popular Stories

error: Content is protected !!