ವಿಧಾನ ಸೌಧದ ಗೋಡೆಗಳು ಲಂಚ-ಲಂಚ ಎಂದು ಪಿಸುಗುಟ್ಟುತ್ತಿವೆ: ಸಿದ್ಧರಾಮಯ್ಯ

ಸಿಂದಗಿ: ಪ್ರಜಾಧ್ವನಿ ಯಾಥ್ರೆ 7ಕೋಟಿ ಕನ್ನಡಿಗರ ಧ್ವನಿಯಾಗಿದೆ. 2014ರಲ್ಲಿ 165 ಭರವಸೆಯ ಪ್ರಣಾಳಿಕೆ ಕೋಟ್ಟಿದ್ದೇವು ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಕೊಟ್ಟ ಮಾತಿನಂತೆ ನಡೆದಿದ್ದು ನಮ್ಮ ಕಾಂಗ್ರೆಸ್ ಸರಕಾರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡ ಪ್ರಜಾಧ್ವನಿ ಯಾತ್ರೆಯ ನಿಮಿತ್ಯ ಹಮ್ಮಿಕೊಂಡ ಬೃಹತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, 2018ರಲ್ಲಿ ಬಿಜೆಪಿ ಸರಕಾರ 600 ಭರವಸೆಗಳನ್ನು ನೀಡಿತ್ತು ಆದರೆ ಅದರಲ್ಲಿ ಕೇವಲ ೫೦ನ್ನು ಮಾತ್ರ ಈಡೇರಿಸಿದ್ದು, ಇನ್ನೂ 550 ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. 5ವರ್ಷದ ಅವಧಿಯಲ್ಲಿ ನಮ್ಮದು ಒಂದು ಭ್ರಷ್ಟಾಚಾರದ ಆರೋಪವಿಲ್ಲದೆ ಸುಗಮವಾಧ ಆಡಳಿತವನ್ನು ನೀಡಿದ್ದೇವೆ. ನನ್ನ ಗಮನಕ್ಕೆ ಬಂದ ಆರೋಪ ಸಿಬಿಐಗೆ ಒಪ್ಪಸಿದ್ದೇನೆ. ಇಂದಿನ ಡಬಲ್ ಇಂಜಿನ್ ಬಿಜೆಪಿ ಸರ್ಕಾರದ ಮೇಲೆ ನಿತ್ಯ ಅನೇಕ ಆರೋಪಗಳು ಕೇಳಿ ಬಂದರು ಒಂದು ತನಿಖೆ ನಡಿಸದೆ ಮುಚ್ಚಿ ಹಾಕುತ್ತಿದ್ದಾರೆ. 

ವಿಧಾನ ಸೌಧದ ಪ್ರತಿ ಗೋಡೆಗೆ ಕಿವಿಗೊಟ್ಟು ಕೇಳಿದರೆ ಬರಿ ಲಂಚ-ಲಂಚ ಎಂದು ಪಿಸುಗುಟ್ಟುತ್ತದೆ. ಈ ಸರ್ಕಾರ ಒಂದು ರೀತಿಯಲ್ಲಿ ಅಲಿಬಾಬಾ ಮತ್ತು 40 ಕಳ್ಳರ ಸರ್ಕಾರ ಎಂದರೆ ತಪ್ಪಾಗುವುದಿಲ್ಲ. ಬಿಜೆಪಿ ಒಂದು ಸುಳ್ಳಿನ ಫ್ಯಾಕ್ಟರಿ ಎಂದ ಅವರು ಸಿಂದಗಿ ಉಪ ಚುಣಾವಣೆಯಲ್ಲಿ ಸುಳ್ಳು ಭರವಸೆಗಳನ್ನು ಹೇಳಿ ಕೋಟ್ಯಂತರ ಸರ್ಕಾರಿ ಹಣಹಾಳು ಮಾಡಿ ಮೋಸದಿಂದ ಗೆದ್ದರು ಆದರೆ ಈ ಬಾರಿ ಹಾಗೇ ಆಗಲು ಸಿಂದಗಿ ಮತದಾರರು ಬಿಡುವುದಿಲ್ಲ.

ಸಂಸದ ತೇಜಶ್ವಿ ಸೂರ್ಯ ರೈತರಿಗೆ ಸಾಲ ಮನ್ನಾ ಮಾಡುವುದು ತಪ್ಪ ಅದು ಮಾಡಬಾರದು ಎಂದು ಹೇಳುತ್ತಿರುವುದು ನ್ಯಾಯವೇ. ನನ್ನ ಅಧಿಕಾರದ ಅವಧಿಯಲ್ಲಿ ರೂ 8165 ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಅದಾನಿ ಅಂಬಾನಿಯಂತಹ ಅನೇಕ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದ್ದಾರೆ ನಾಚಿಕೆಯಾಗಬೇಕು ಎಂದರು.

ಈ ಸಂಧರ್ಬದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ, ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಸಿ.ಎಸ್.ನಾಡಗೌಡ, ಡಾ ಶಾಂತವೀರ ಮನಗೂಳಿ, ಅಶೋಕ ಶಾಬಾದಿ, ಬಿ.ಎಸ್.ಪಾಟೀಲ ಯಾಳಗಿ, ಮಲ್ಲಣ್ಣ ಸಾಲಿ, ಚನ್ನು ವಾರದ, ವಿಠ್ಠಲ ಕೋಳೂರ, ಎಸ್.ಎಮ್,ಪಾಟೀಲ ಗಣಿಹಾರ, ರಾಕೇಶ ಕಲ್ಲೂರ, ಅರವಿಂದ ಹಂಗರಗಿ, ಶಾರದಾ ಬೇಟಗೇರಿ, ಮಹಾನಂದ ಬಮ್ಮಣ್ಣಿ, ಸಂತೊಷ ಹರನಾಳ, ರಾಜಶೇಖರ ಕೂಚಬಾಳ, ಪರುಷುರಾಮ ಕಾಂಬಳೆ ಸೇರಿದೆಂತೆ ಅನೇಕರು ಇದ್ದರು.

ಈ ವೇಳೆ ನೂರಾರು ಜನರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿದರು.

ಮೆರವಣಿಗೆ: ಪಟ್ಟಣದ ಶ್ರೀ ಬಸವೇಶ್ವರ ವೃತ್ತದಿಂದ ಅಂಜುಮನ ಆವರಣದ ವರೆಗೆ ತೆರೆದ ಬಸ್ಸಿನ ಮುಖೇನ ರಾಜ್ಯ ನಾಯಕರನ್ನು ಅಬೂತ ಪೂರ್ವ ಮೆರವಣಿಗೆ ಮಾಡಿ ಪುಷ್ಪದ ಮಳೆ ಸುರಿಸಿದರು.

Latest Indian news

Popular Stories