ನವದೆಹಲಿ: ಏರ್ ಇಂಡಿಯಾ ವಿಮಾನ ಹಾರಾಟ ಮಾರ್ಗ ಮಧ್ಯದಲ್ಲಿ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ದೂರುದಾರ ಮಹಿಳೆಯೇ ಆಕೆ ಕುಳಿತಿದ್ದ ಆಸನದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾಗಿ ಆರೋಪಿ ಶಂಕರ್ ಮಿಶ್ರಾ ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಕಳೆದ ವರ್ಷದ ನವೆಂಬರ್ 26 ರಂದು ನ್ಯೂಯಾರ್ಕ್ ನಿಂದ ನವದೆಹಲಿ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಸೀಟನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಅಲ್ಲಿಗೆ ಹೋಗಲು ಸಾಧ್ಯವಿರಲಿಲ್ಲ. ದೂರುದಾರ ಮಹಿಳೆಯೇ ಸ್ವತಃ ಮೂತ್ರ ವಿಸರ್ಜನೆ ಮಾಡಿರುವುದಾಗಿ ಆರೋಪಿ ಶಂಕರ್ ಶರ್ಮಾ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ದೂರುದಾರ ಮಹಿಳೆ ಕಥಕ್ ಡ್ಯಾನ್ಸರ್ ಆಗಿದ್ದು, ಈ ವಿಚಾರದಲ್ಲಿ ಅವರು ನಾಟಕ ಮಾಡುತ್ತಿರುವುದಾಗಿ ಆರೋಪಿ ಹೇಳಿಕೊಂಡಿದ್ದಾರೆ.
ವಿಮಾನದ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗುವುದು ಅಸಾಧ್ಯವಲ್ಲ. ಕ್ಷಮಿಸಿ, ಆದರೆ ನಾನು ಸಹ ಪ್ರಯಾಣಿಸಿದ್ದೇನೆ. ಯಾರು ಬೇಕಾದರೂ ಯಾವುದೇ ಸಾಲಿನಿಂದ ಸುತ್ತಲೂ ಬಂದು ಯಾವುದೇ ಆಸನಕ್ಕೆ ಹೋಗಬಹುದು ಎಂದು ಹೇಳಿದ ಸೆಷನ್ಸ್ ನ್ಯಾಯಾಧೀಶರು. ವಿಮಾನದ ಸೀಟುಗಳ ರೇಖಾಚಿತ್ರ ಬಿಡಿಸುವಂತೆ ಅಲ್ಲಿದ್ದ ಸಿಬ್ಬಂದಿಗೆ ತಿಳಿಸಿತು.
ಶಂಕರ್ ಮಿಶ್ರಾ ಅವರ ಕಸ್ಟಡಿಯನ್ನು ನಿರಾಕರಿಸಿ ಜನವರಿ 7 ರಂದು ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ ಅರ್ಜಿ ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿರುವ ಪರಿಷ್ಕೃತ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಶುಕ್ರವಾರ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಲಿಲ್ಲ. ಜೈಲಿನಲ್ಲಿರುವ ಶಂಕರ್ ಮಿಶ್ರಾಗೆ ಜಾಮೀನು ಕೂಡಾ ಮಂಜೂರು ಮಾಡಲಿಲ್ಲ.