ವಿರೋಧಕ್ಕೆ ಕ್ಯಾರೆ ಎನ್ನದ ಪ್ರೇಕ್ಷಕ: 1,028 ಕೋಟಿ ರೂ. ಕಲೆಕ್ಷನ್‌ – ಪಠಾಣ್ ಸಿನಿಮಾ ಸರ್ವಕಾಲಿಕ ದಾಖಲೆ

ಮುಂಬೈ: ಬಾಲಿವುಡ್‌ ನಟ ಶಾರುಖ್ ಖಾನ್‌ ಸಿನಿ ಜೀವನಕ್ಕೆ ಮಹತ್ತರ ತಿರುವು ನೀಡಿದ ಪಠಾಣ್‌, ವಿಶ್ವದಾದ್ಯಂತ 1,028 ಕೋಟಿ ರೂ. ಕಲೆಕ್ಷನ್‌ ಗಳಿಸಿದ ದೇಶದ ಏಕೈಕ, ಸಾರ್ವಕಾಲಿಕ ಹಿಂದಿ ಸಿನಿಮಾ ಎನ್ನುವ ಖ್ಯಾತಿಗೆ ಪಾತ್ರವಾಗಿದೆ ಎಂದು ಯಶ್‌ರಾಜ್‌ ಫಿಲ್ಮ್ಸ್ ಹೇಳಿದೆ.

ಹಲವು ಭಾಷೆಗಳಲ್ಲಿ ಬಿಡುಗಡೆಗೊಂಡಿರುವ ಪಠಾಣ್‌, ಹಿಂದಿ ಭಾಷೆಯೊಂದರಲ್ಲೇ ದೇಶಿಯವಾಗಿಯೇ ಬಿಡುಗಡೆಗೊಂಡ ಮೊದಲವಾರದಲ್ಲೇ 105ಕೋಟಿ ರೂ.ಗಳಿಕೆಯನ್ನು ದಾಖಲಿಸಿತ್ತು.

ಪಠಾಣ್‌ಗೆ ಭಾರತದಲ್ಲಿ 641.50 ಕೋಟಿ ರೂ. ಕಲೆಕ್ಷನ್‌ ದಾಖಲಾಗಿದ್ದರೆ, ವಿದೇಶಗಳಿಂದ 386.50 ಕೋಟಿ ರೂ. ಕಲೆಕ್ಷನ್‌ ಆಗಿದೆ.

Latest Indian news

Popular Stories