ಬೆಂಗಳೂರು: ಪಟ್ನಾ ದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯ ನಂತರ ಬಿಜೆಪಿ ಕಂಗಲಾಗಿದೆ. ಇದೀಗ ವಿರೋಧ ಪಕ್ಷಗಳ ಒಗ್ಗಟ್ಟಿನ ಸಂದರ್ಭದಲ್ಲಿ ಬಿಜೆಪಿಗೆ ಎನ್.ಡಿ.ಎಯ ಕುರಿತು ನೆನಪಾಗಿದೆ. ಈಗ ತರಾತಿರಿಯಲ್ಲಿ ಸಭೆ ಕರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜೈ ರಾಮ್ ರಮೇಶ್ ಹೇಳಿದರು.
ಜೀವವಿಲ್ಲದ ಎನ್.ಡಿ.ಎಗೆ ಇದೀಗ ವಿರೋಧ ಪಕ್ಷಗಳ ಒಗ್ಗಟ್ಟಿನ ಸಂದರ್ಭದಲ್ಲಿ ಹೆದರಿ ಜೀವ ತುಂಬಲು ಹೊರಟಿದೆ. ಈ ಬಾರಿ ಬಿಜೆಪಿ ಮತ್ತು ಮೋದಿಯನ್ನು ಜನ ಕಿತ್ತೆಸೆಯಲಿದ್ದಾರೆಂದು ಹೇಳಿದರು.
ನಾಳೆ ಅಧಿಕೃತವಾಗಿ ಸಭೆ ನಡೆಯಲಿದೆ. 26 ಪಕ್ಷದ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಔತಣಕೂಟ ಆಯೋಜಿಸಿದ್ದಾರೆ. ನಾಳೆ ನಾಲ್ಕು ಗಂಟೆಗೆ ಪತ್ರಿಕಾಗೋಷ್ಠಿಯನ್ನು ಎಲ್ಲ ಪಕ್ಷದ ಮುಖಂಡರು ಸೇರಿ ನಡೆಸಲಿದ್ದಾರೆ ಎಂಬ ಮಾಹಿತಿ ಈ ಸಂದರ್ಭದಲ್ಲಿ ನೀಡಿದ್ದಾರೆ.