ನವದೆಹಲಿ: ದೇಶದಲ್ಲಿ ಬಹು ಚರ್ಚಿತ ಮತ್ತು ದೊಡ್ಡ ಮಟ್ಟದಲ್ಲಿ ಜನ ವಿರೋಧ ಎದುರಾಗಿದ್ದ ಸಿಎಎ ಕಾಯಿದೆಯ ಸಿಂಧುತ್ವ ಪ್ರಶ್ನಿಸಿ 219 ಅರ್ಜಿಗಳು ನ್ಯಾಯಾಲಯದಲ್ಲಿ ದಾಖಲಾಗಿದೆ.
ಇದರ ವಿಚಾರಣೆಯು ಮುಖ್ಯ ನ್ಯಾಯಾಧೀಶರಾದ ಯುಯು ಲಲಿತ್ ಮತ್ತು ನ್ಯಾಯಾಧೀಶ ರವೀಂದ್ರ ಭಟ್ ಪೀಠದ ಎದುರು ವಿಚಾರಣೆಗೆ ಬಂದಿತು. ಅರ್ಜಿದಾರರು ವಿಚಾರಣೆಯನ್ನು ಮುಂದಿನ. ವಾರ ನಡೆಸುವಂತೆ ಕೋರಿಕೊಂಡ ಹಿನ್ನಲೆಯಲ್ಲಿ ಅರ್ಜಿ ವಿಚಾರಣೆಯನ್ನು ಪೀಠವು ಮುಂದಿನ ಸೋಮವಾರಕ್ಕೆ ನಿಗದಿ ಮಾಡಿದೆ.
ಸಿಎಎ ಕಾಯಿದೆಯನ್ನು ವಿರೋಧಿಸಿ ದೇಶದಾದ್ಯಂತ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ದೀರ್ಘ ಕಾಲದ ಪ್ರತಿಭಟನೆಯಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದರು. ಧರ್ಮದ ಆಧಾರದಲ್ಲಿ ತಾರತಮ್ಯ ನೀತಿಯನ್ನು ಈ ಕಾಯಿದೆ ಪ್ರತಿನಿಧಿಸುತ್ತದೆ. ಇದು ಸಂವಿಧಾನ ಬಾಹಿರ ಕಾಯಿದೆ ಎಂಬುವುದು ಪ್ರತಿಭಟನಾಕಾರರ ವಾದ.