ವಿಶ್ವಕಪ್ ಟಿ-20: ಮುಂದಿನ ವರ್ಷ ಅರ್ಹವಾದ ತಂಡಗಳ ವಿವರ

ಅಬುಧಾಬಿ: ವೆಸ್ಟ್ ಇಂಡೀಸ್ ಸೆಮಿಫೈನಲ್ ರೇಸ್ ನಿಂದ ಔಟ್ ಆಗಿದೆ. ಅಬುಧಾಬಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು.

ಈ ಸೋಲಿನೊಂದಿಗೆ ಕೆರಿಬಿಯನ್ ತಂಡ ಮುಂದಿನ ವರ್ಷದ ಟಿ20 ವಿಶ್ವಕಪ್‌ನ ಸೂಪರ್-12 ಹಂತಕ್ಕೆ ನೇರವಾಗಿ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಸೂಪರ್-12ರಲ್ಲಿ ನೇರ ಟಿಕೆಟ್ ಪಡೆದ ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ.

ಈ ಬಾರಿಯ ಟಿ-20 ವಿಶ್ವಕಪ್ ರೋಚಕ ತಿರುವುಗಳೊಂದಿಗೆ ಅಂತಿಮ ಘಟ್ಟದ ಹೊಸ್ತಿಲಿಗೆ ಬಂದು ನಿಂತಿದೆ. ಗ್ರೂಪ್ 1ರಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಸೆಮಿಪೈನಲ್ ನಲ್ಲಿ ಆಡುವ ಎರಡು ತಂಡಗಳಾಗಿವೆ.

ಅದರಂತೆ ಗ್ರೂಪ್ 2ರಿಂದ ಈಗಾಗಲೇ ಪಾಕಿಸ್ತಾನ ತನ್ನ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಆದರೆ, ಇನ್ನೊಂದು ಟೀಮ್ ಯಾವುದು ಅನ್ನೋದು ಇಂದು ನಿರ್ಧಾರವಾಗುವ ಸಾಧ್ಯತೆ ಇದೆ.

Latest Indian news

Popular Stories

error: Content is protected !!