ಉಡುಪಿ: ಉಡುಪಿಯ ಖಾಸಗಿ ಪ್ಯಾರಾಮೆಡಿಕಲ್ ಕಾಲೇಜಿನ ವೀಡಿಯೋ ಪ್ರಕರಣದಸಮಗ್ರ ತನಿಖೆಗೆ ಒತ್ತಾಯಿಸಿ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕೃಷ್ಣ ಮಠದ ಪಾರ್ಕಿಂಗ್ ಎರಿಯಾದಲ್ಲಿ ಪ್ರತಿಭಟನಾ ಸಭೆ ಆಯೋಜಿಸಿದ್ದು ಆರಂಭದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ರಶ್ಮೀ ಸಾಮಂತ್ ಮಾತನಾಡಿ, ಹಿಂದೂ ಸಮಾಜದ ಮೇಲೆ ನಿರಂತರ ದಾಳಿ ಆಗುತ್ತಿದೆ.ಕಾಲೇಜಿನಲ್ಲಿ ನಡೆದ ಘಟನೆ ಅಪರಾಧ ಅಂತ ಯಾರೂ ಪರಿಗಣಿಸಿಲ್ಲ.ಹಿಂದುಗಳ ಮೇಲೆ ಅನ್ಯಾಯವಾದರೆ ಅದು ಅಪರಾಧ ಅಲ್ಲ ಅಂತ ಸಮಾಜ ಪರಿಗಣಿಸುತ್ತದೆ ಎಂದರು.
ಉಡುಪಿ ಜಿಲ್ಲೆಗೆ ನಾಚಿಕೆಗೇಡಿನ ಸಂಗತಿ.ಯುವತಿಯರ ಮರ್ಯಾದೆ ಒಮ್ಮೆ ಕಳೆದುಕೊಂಡರೆ ಮತ್ತೆ ವಾಪಾಸ ಪಡೆಯಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಮಾತನಾಡಿ, ಸನಾತನ ಹಿಂದೂ ಸಂಸ್ಕೃತಿ ನಾಶ ಮಾಡಲು ರಾಕ್ಷಸಿಯರು ಬಂದಿದ್ದರು.ಜಿಹಾದಿ ರಾಕ್ಷಸಿಯರ ಮೂಲಕ ಹಿಂದೂ ಹೆಣ್ಮಕ್ಕಳ ಮಾನ ತೆಗೆಯಲು ಬಂದಿದ್ದಾರೆ. ಜಿಹಾದಿ ರಾಕ್ಷಸಿಯರಿಗೆ ಹಿಂದು ರಕ್ಷಕರಾಗಿ ಉತ್ತರ ಕೊಡುತ್ತೇವೆ. ಇಂತಹ ದಾಳಿ ಇಂದಿಗೇ ಕೊನೆಯಾಗಬೇಕು. ಹಿಂದೂ ತಾಯಂದಿರು ಎಚ್ಚರ ಆಗಬೇಕು ಎಂದು ಕರೆ ನೀಡಿದರು.
ಸೌಟು ಪೊರಕೆ ಹಿಡಿಯುವ ಕೈಯ್ಯಲ್ಲಿ ಶಸ್ತ್ರಾಸ್ತ್ರ ಹಿಡಿಯಿರಿ. ಅನ್ಯಾಯವಾದಾಗ ತಲವಾರು, ಕತ್ತಿ ಹಿಡಿಯಲು ರೆಡಿಯಾಗಿ.ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂಬ ಎಚ್ಚರಿಕೆ ಕೊಡಬೇಕಾಗಿದೆ. ಹಿಂದು ಯುವತಿಯರು, ಶ್ರದ್ಧಾಕೇಂದ್ರಗಳನ್ನು ಮುಸಲ್ಮಾನರು ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳಿದರು.
ಆರೋಪಿ ವಿದ್ಯಾರ್ಥಿನಿಯರಿಗೆ ಪಿ.ಎಫ್.ಐ ನಂಟಿದೆ.ದೇಶವನ್ನು ಇಸ್ಲಾಮೀಕರಣ ಮಾಡುವ ಕೆಲಸ ಆಗುತ್ತಿದೆ. ಧಾರ್ಮಿಕ ಮುಖಂಡರು, ಉಲೇಮಾಗಳು ಧಾರ್ಮಿಕ ಸಂಘಟನೆ ಮಾತೆತ್ತುತ್ತಿಲ್ಲ. ದೊಡ್ಡ ಪ್ರಕರಣ ಆದರೂ ಯಾಕೆ ಖಂಡಿಸುತ್ತಿಲ್ಲ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರ ಸ್ತ್ರೀ ಶಕ್ತಿ ಗ್ಯಾರೆಂಟಿ ಕೊಡುತ್ತಿದ್ದೀರಿ. ಮದರಸ ಶಿಕ್ಷಣ ಭಾರತದ ಐಕ್ಯತೆಗೆ ಧಕ್ಕೆಯಾಗುತ್ತಿದೆ. ರಾಜ್ಯದಲ್ಲಿ ಮದರಸ ಶಿಕ್ಷಣ ಬ್ಯಾನ್ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಶರಣ್ ಪಂಪ್ ವೆಲ್ ವಿನಂತಿಸಿದರು.