ವೈಎಸ್‌ವಿ ದತ್ತಾ ಜೆಡಿಎಸ್‌ಗೆ ವಾಪಸ್‌?

ಬೆಂಗಳೂರು: ಕಾಂಗ್ರೆಸ್‌ ಸೇರಿ ಟಿಕೆಟ್‌ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಶಾಸಕ ವೈ.ಎಸ್‌.ವಿ. ದತ್ತಾ ಮತ್ತೆ ಜೆಡಿಎಸ್‌ಗೆ ಮರಳಲು ಮುಂದಾಗಿದ್ದಾರೆ. ಬುಧವಾರ ಪದ್ಮನಾಭನಗರ ನಿವಾಸದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ಭೇಟಿ ಮಾಡಿದ ಅವರು 20 ನಿಮಿಷ ಮಾತುಕತೆ ನಡೆಸಿ, ಕಾಂಗ್ರೆಸ್‌ ಸೇರಿ ನನ್ನಿಂದ ತಪ್ಪಾಗಿದೆ. ತಾವು ಒಪ್ಪಿಗೆ ನೀಡಿದರೆ ವಾಪಸ್‌ ಬರುವುದಾಗಿ ತಿಳಿಸಿದ್ದಾರೆ.

ಎಚ್‌.ಡಿ. ಕುಮಾರಸ್ವಾಮಿ ಜತೆ ಚರ್ಚಿಸಿ ತಿಳಿಸುವುದಾಗಿ ದೇವೇಗೌಡರು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ದತ್ತಾ ಜೆಡಿಎಸ್‌ಗೆ ಬಂದರೆ ಈಗಾಗಲೇ ಘೋಷಿ ಸಿರುವ ಧನಂಜಯ ಅವರ ಟಿಕೆಟ್‌ ಅನ್ನು ದತ್ತಾ ಅವರಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Latest Indian news

Popular Stories