ವೈದ್ಯಕೀಯ ಕೋರ್ಸ್’ಗಳ ಶುಲ್ಕದಲ್ಲಿ ಹೆಚ್ಚಳದ ಕುರಿತು ಸಚಿವ ಸುಧಾಕರ್ ಸ್ಪಷ್ಟನೆ

ಬೆಂಗಳೂರು: ಕೋವಿಡ್ ನಿಂದ ಜನ- ಸಾಮಾನ್ಯರು ತತ್ತರಿಸಿ ಹೋಗಿದ್ದು, ಈ ವರ್ಷ ವೈದ್ಯಕೀಯ ಕೋರ್ಸ್ ಗಳ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಂಗಳವಾರ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಮೆಡಿಕಲ್ ಕಾಲೇಜುಗಳ ಒಕ್ಕೂಟ ಶೇ.30% ಶುಲ್ಕ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮೆಡಿಕಲ್‌ ಕಾಲೇಜುಗಳ ಒಕ್ಕೂಟ ಪ್ರಸ್ತಾವನೆ ಮಾಡಿದ್ದರು,ಆದರೆ ಶುಲ್ಕ ಹೆಚ್ಚಳ ಮಾಡುವುದಿಲ್ಲ,ಕೋವಿಡ್ ಸಂಕಷ್ಟ ದಲ್ಲಿರುವ ಪೋಷಕರಿಗೆ ಮತ್ತಷ್ಟು ಹೊರೆ ಕೊಡಲು ಇಷ್ಟವಿಲ್ಲ’ ಎಂದರು.

ಇಂದು ಮೆಡಿಕಲ್ ಕಾಲೇಜು ಗಳ ಒಕ್ಕೂಟದೊಂದಿಗೆ ಸಭೆ ನಡೆಯಲಿದೆ.ಇಲ್ಲಿ ಅಂತಿಮ ತೀರ್ಮಾನ ಮಾಡಲಾಗುವುದು.
ಕಳೆದ ಬಾರಿ ಕೋವಿಡ್ ನಡುವೆಯೂ ಶುಲ್ಕ ಹೆಚ್ಚಳ ಮಾಡಲಾಗಿತ್ತು.ಈಗ ಮತ್ತೆ ಶುಲ್ಕ ಹೆಚ್ಚಳ ಮಾಡುವುದು ಸರಿಯಲ್ಲ’ಎಂದರು.

Latest Indian news

Popular Stories

error: Content is protected !!