ಶಿರ್ವದ ಬಾಲಪ್ರತಿಭೆಗೆ ದೆಹಲಿಯಲ್ಲಿ ರಕ್ಷಣಾ ಸಚಿವರಿಂದ ಸಮ್ಮಾನ

ಶಿರ್ವ: ಇಲ್ಲಿನ ಡಾನ್‌ ಬೊಸ್ಕೊ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಏಡನ್‌ ಕ್ರಿಸ್‌ ದಾಂತಿ ಗಣರಾಜ್ಯದಿನದ ಪರೇಡ್‌ ನಲ್ಲಿ ರಕ್ಷಣ ಸಚಿವ ರಾಜ್‌ನಾಥ ಸಿಂಗ್‌ ಅವರ ವಿಶೇಷ ಅತಿಥಿಯಾಗಿ ಭಾಗವಹಿಸಿ ದಿಲ್ಲಿಯ ರಕ್ಷಾ ಸಂಪದ ಭವನದಲ್ಲಿ ಸಮ್ಮಾನಗೊಂಡು ಪ್ರಶಸ್ತಿ ಪುರಸ್ಕಾರ ಪಡೆದರು.

ದೇಶದ ರಕ್ಷಣ ಸಚಿವಲಯವು ನ. 22ರಂದು ವೀರ್‌ಗಾಥಾ -2.0 ಎಂಬ ಪ್ರಾಜೆಕ್ಟನ್ನು ದೇಶಾದ್ಯಂತ ಹಮ್ಮಿಕೊಂಡಿತ್ತು. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ದೇಶದ ರಕ್ಷಣೆ ಮಾಡುವ ವೀರ ಯೋಧರ ಜೀವನದ ಬಗ್ಗೆ ಅವರಿಂದ ವಿದ್ಯಾರ್ಥಿಗಳಿಗೆ ಸಿಗುವ ಸ್ಫೂರ್ತಿಯ ಬಗ್ಗೆ ಕಥೆ, ಕವನ, ಪ್ರಬಂಧ, ಚಿತ್ರಕಲೆ ಇತ್ಯಾದಿಗಳನ್ನು ಆಯೋಜಿಸಲಾಗಿತ್ತು.

ಏಡನ್‌ 3ರಿಂದ 5ನೇ ತರಗತಿ ವರೆಗಿನ ಮಕ್ಕಳ ವಿಭಾಗದಲ್ಲಿ ವೀರ ಯೋಧ ಪರಮ್‌ ವೀರಚಕ್ರ ಪ್ರಶಸ್ತಿ ಪುರಸ್ಕೃತ ವಿಕ್ರಮ್‌ ಭಾತ್ರಾ ಅವರ ಜೀವನದ ಬಗ್ಗೆ ಹಿಂದಿ ಕವನ ರಚಿಸಿದ್ದರು. ಜ. 3ರಂದು ಫಲಿತಾಂಶ ಪ್ರಕಟಗೊಂಡಿದ್ದು, ದೇಶದ ಸರ್ವಶ್ರೇಷ್ಠ 25 ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಆಯ್ಕೆಗೊಂಡಿದ್ದರು.

Latest Indian news

Popular Stories