ಶಿವಣ್ಣನ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು- ದುನಿಯಾ ವಿಜಯ್

ವರುಣಾ: ಹಿರಿಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹಾಗೂ ವಿ. ಸೋಮಣ್ಣ ನಡುವಿನ ಸಮರದಿಂದಾಗಿ ಮೈಸೂರಿನ ವರುಣಾ ಕ್ಷೇತ್ರ ರಾಜ್ಯ ಮಾತ್ರವಲ್ಲದೇ ಇಡೀ ದೇಶಾದ್ಯಂತ ತೀವ್ರ ಕುತೂಲಹಕ್ಕೆ ಕಾರಣವಾಗಿದೆ.

ಚುನಾವಣೆಗೆ ಇನ್ನೂ ಐದು ದಿನ ಬಾಕಿಯಿರುವಂತೆಯೇ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಸಾಗಿದ್ದು, ಸಿದ್ದರಾಮಯ್ಯ ಪರ ಸ್ಯಾಂಡಲ್ ವುಡ್ ನ ಖ್ಯಾತ ನಟರಾದ ಶಿವರಾಜ್ ಕುಮಾರ್,  ದುನಿಯಾ ವಿಜಯ್, ಯೋಗೇಶ್ (ಲೂಸ್ ಮಾದ) ರಮ್ಯಾ, ನಿಶ್ವಿಕಾ ನಾಯ್ಡು ಸೇರಿದಂತೆ ಹಲವು ತಾರೆಯರು ಪ್ರಚಾರ ನಡೆಸಿದ್ದಾರೆ.

ಅದರಲ್ಲೂ ತನ್ನ ಜೀವನದುದ್ದಕ್ಕೂ ಎಂದಿಗೂ ರಾಜಕೀಯದಲ್ಲಿ ಆಸೆ ಪಡದ ಅಥವಾ ಯಾರ ಪರವಾಗಿಯೂ ಪ್ರಚಾರ, ಸಭೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದ ವರನಟ ಡಾ. ರಾಜ್ ಕುಮಾರ್ ಅವರ ಪುತ್ರ ಡಾ. ಶಿವರಾಜ್ ಕುಮಾರ್ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿರುವುದಕ್ಕೆ ಬಿಜೆಪಿ ನಾಯಕರು ಹಾಗೂ ಕೆಲ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪುನೀತ್  ಹಾಗೂ ಗೀತಾ ಶಿವರಾಜ್ ಕುಮಾರ್ ಅವರ ಹೆಸರು ಹೇಳಿದ್ದಕ್ಕೆ ವಿ. ಸೋಮಣ್ಣ ಹಾಗೂ ಪ್ರತಾಪ್ ಸಿಂಹ ವಿರುದ್ಧ ಶಿವಣ್ಣ ಕೂಡಾ ಗರಂ ಆಗಿದ್ದಾರೆ. 

ಶಿವಣ್ಣ ವಿರುದ್ಧ ಬಿಜೆಪಿ ನಾಯಕರ ಹೇಳಿಕೆಯಲ್ಲಿ ವರುಣಾದಲ್ಲಿ ಮಾತನಾಡಿದ ದುನಿಯಾ ವಿಜಯ್, ದೊಡ್ಡ ಮನೆಯ ದೊಡ್ಡ ಮಗನಾದ ಶಿವರಾಜ್ ಕುಮಾರ್ ಅವರ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು ಎಂದಿದ್ದಾರೆ.ಶಿವರಾಜ್ ಕುಮಾರ್ ಎಲ್ಲರನ್ನೂ ಪ್ರೀತಿಸುವವರು. ಯಾರು ಕರೆದರೂ ಚುನಾವಣಾ ಪ್ರಚಾರಕ್ಕೆ ಹೋಗುತ್ತಾರೆ. ಅಣ್ಣಾವ್ರ ಮನೆಯವರು, ದೊಡ್ಡತನ ಹೊಂದಿರುವವರು. ದೇವರಂತಹ ಮನಸ್ಸಿನವರು. ಯಾವುದೇ ಕಾರಣಕ್ಕೂ ದೊಡ್ಡತನವನ್ನು ಕಳೆದುಕೊಂಡವರಲ್ಲ. ಅವರ ಬಗ್ಗೆ ಮಾತನಾಡುವುದು ತಪ್ಪು ಎಂದರು. 

    Latest Indian news

    Popular Stories