ಶಿವರಾಜ್ ಕುಮಾರ್ ಪತ್ನಿ ಕಾಂಗ್ರೆಸ್ ಸೇರ್ಪಡೆ – ಪತಿಯ ಬೆಂಬಲ

ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್(Geetha Shivarajkumar)  ಇಂದು(ಏಪ್ರಿಲ್ 29) ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ದೊಡ್ಮನೆ ಸೊಸೆ ಕಾಂಗ್ರೆಸ್​ ಸೇರುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆದಿವೆ. ಕೆಲವರು ಗೀತಾ ಶಿವರಾಜ್​ ಕುಮಾರ್​ ಅವರ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತಿದ್ದರೆ, ಇನ್ನೂ ಕೆಲವರು ಸ್ವಾಗತಿಸಿದ್ದಾರೆ.

ಇನ್ನು ಪತ್ನಿ ಗೀತಾ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇದೀಗ ಸ್ವತಃ ಶಿವರಾಜ್ ಕುಮಾರ್ (Shivarajkumar)  ಬೆಂಬಲಿಸಿದ್ದಾರೆ. ಅಲ್ಲದೇ ಪತ್ನಿ ಜೊತೆ ತಾವು ಪ್ರಚಾರಕ್ಕೆ ಹೋಗುವುದಾಗಿ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ದೊಡ್ಮನೆ ಬಲ ಕಾಂಗ್ರೆಸ್​ಗೆ ಸಿಕ್ಕಂತಾಗಿದೆ.

Latest Indian news

Popular Stories