ದೇಶದ ಜನತೆಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಲು ಮುಂದಾಗಿದ್ದು, ಶೀಘ್ರದಲ್ಲೇ ಪೆಟ್ರೋಲ್ ಮತ್ತು ಡಿಸೇಲ್ ಇಳಿಕೆಯಾಗುವ ಸಾಧ್ಯತೆಯಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತೈಲ ಕಂಪನಿಗಳಿಗೆ ಇಂಧನ ಬೆಲೆಗಳನ್ನ ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ.
ಅಂತರಾಷ್ಟ್ರೀಯ ತೈಲ ಬೆಲೆಗಳು ನಿಯಂತ್ರಣದಲ್ಲಿದ್ರೆ, ಕಂಪನಿಗಳ ಅಂಡರ್-ರಿಕವರಿ ನಿಂತರೆ, ತೈಲ ಕಂಪನಿಗಳಿಗೆ ದೇಶದಲ್ಲಿ ತೈಲ ಬೆಲೆಯನ್ನ ಕಡಿಮೆ ಮಾಡಲು ಸೂಚಿಸಲಾಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾಗುತ್ತಿದ್ದರೂ ತೈಲ ಬೆಲೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಅದ್ರಂತೆ, ನವೆಂಬರ್ 2021 ಮತ್ತು ಮೇ 2022 ರಲ್ಲಿ ಅಬಕಾರಿ ಸುಂಕವನ್ನ ಕಡಿಮೆ ಮಾಡಲು ಸರ್ಕಾರ ಹೇಳಿದೆ. ಆದರೂ ಕೆಲವು ರಾಜ್ಯ ಸರ್ಕಾರಗಳು ವ್ಯಾಟ್ ಇಳಿಸಿಲ್ಲ. ಇದರಿಂದಾಗಿ ಅಲ್ಲಿ ತೈಲ ಬೆಲೆ ಇನ್ನೂ ಹೆಚ್ಚಿದೆ ಎಂದು ಹೇಳಿದರು.
ಇನ್ನು ಕಳೆದ ಕೆಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಕೆಯಿಂದ ಕಂಪನಿಗಳ ಮೇಲಿನ ಒತ್ತಡ ತಗ್ಗಿದ್ದರೂ, ಹಿಂದಿನ ನಷ್ಟವನ್ನ ಸರಿದೂಗಿಸಲು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಕಡಿತ ಮಾಡಿಲ್ಲ. ಇನ್ನು ತೈಲ ಕಂಪನಿಗಳು ನಷ್ಟದಿಂದ ಚೇತರಿಸಿಕೊಂಡ ನಂತರ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.