ಉಡುಪಿ: ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66 ರ ಜಂಕ್ಷನ್ ಟ್ರಾಫಿಕ್ ಜಾಮ್ ಸಮಸ್ಯೆಯೊಂದಿಗೆ ಅಪಘಾತಗಳು ಹೆಚ್ಚಾದ ಹಿನ್ನಲೆಯಲ್ಲಿ ಫ್ಲೈಒವರ್ ನಿರ್ಮಾಣಕ್ಕಾಗಿ ಸಾರ್ವಜನಿಕರು ಆಗ್ರಹಿಸಿದ್ದರು. ಜನರ ಬೇಡಿಕೆಗೆ ಮಣಿದ ಸರಕಾರ ನಂತರ 27.4 ಕೋಟಿ ಅನುದಾನ ಬಿಡುಗಡೆ ಮಾಡಿ ಒವರ್ ಪಾಸ್’ಗೆ ಅನುಮತಿ ನೀಡಲಾಗಿತ್ತು.
ಇದೀಗ ಸಂತೆಕಟ್ಟೆ ಜಂಕ್ಷನ್’ನಲ್ಲಿ ಒವರ್’ಪಾಸ್ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು ಸಂತೆಕಟ್ಟೆ ಜಂಕ್ಷನ್’ನಿಂದ ಆಶಿವಾರ್ದ್ ಥಿಯೇಟರ್ ವರೆಗೆ ಹೆದ್ದಾರಿ ತಡೆದು ಕಾಮಗಾರಿ ನಡೆಸಲಾಗುತ್ತಿದೆ. ಇದೀಗ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ.
ಅಂಬಲಪಾಡಿ ಜಂಕ್ಷನ್ ನಲ್ಲೂ ಒವರ್ ಪಾಸ್ ನಿರ್ಮಾಣದ ಪ್ರಸ್ತಾಪವಿದ್ದು ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸಾರ್ವಜನಿಕರ ಬಹುದಿನದ ಬೇಡಿಕೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಂದಿಸಿದೆ ಎನ್ನಬಹುದು.