ಸಂತೆಕಟ್ಟೆ: ಮಾವಿನ ಮರಕ್ಕೆ ಕಟ್ಟಿದ್ದ ಸರ್ವಿಸ್ ವಯರ್; ಮರ ಹತ್ತಿದಾಗ ಶಾಕ್ – ಕಾರ್ಮಿಕ ಮೃತ್ಯು

ಉಡುಪಿ: ಮಾವಿನ ಹಣ್ಣು ಕೊಯ್ಯಲು ಮರ ಹತ್ತಿದಾಗ ಮಾವಿನ ಮರಕ್ಕೆ ಕಟ್ಟಿದ್ದ ಸರ್ವಿಸ್ ವಯರ್ ತಗುಲಿ ಕಾರ್ಮಿಕ ಮೃತ ಪಟ್ಟಿದ್ದಾನೆ.

ಹೊಸದಾಗಿ ನಿರ್ಮಾಣವಾಗುತ್ತಿರುವ ಮಾಂಡವಿ ಅಪಾರ್ಟ್ ಮೆಟ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಬಿಶುದಾಸ್ (52) ಮೃತಪಟ್ಟಿದವರೆಂದು ಗುರುತಿಸಲಾಗಿದೆ.

ಅಪಾರ್ಟ್‌ಮೆಂಟ್‌ನ ವಿದ್ಯುತ್‌ಗಾಗಿ ಸರ್ವೀಸ್‌ವಯರ್‌ನ್ನು ಮರಕ್ಕೆ ಕಟ್ಟಿ ಅಲ್ಲಿಂದ ಅಪಾರ್ಟ್‌ಮೆಂಟ್‌ಕೆಡೆಗೆ ತೆಗೆದುಕೊಂಡು ಬಂದಿದ್ದು. ಬಿಶುದಾಸ್‌ರವರು ಅಪಾರ್ಟ್‌ಮೆಂಟ್‌ಬಳಿ ಇರುವ ಮಾವಿನ ಮರದಿಂದ ಮಾವಿನ ಕಾಯಿ ಕೀಳಲು ಮರ ಹತ್ತಿದ್ದು, ಮಾವಿನ ಮರಕ್ಕೆ ಕಟ್ಟಿರುವ ವಿದ್ಯುತ್‌ ಸರ್ವೀಸ್‌ ವಯರ್‌ನಿಂದ ವಿದ್ಯುತ್‌ಹರಿದು, ಬಿಶುದಾಸ್‌ನು ಮರದಿಂದ ಕೆಳಗೆ ಬಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಬಿಶುದಾಸ್‌ನ ಸಾವಿಗೆ ಅಪಾರ್ಟ್‌ಮೆಂಟ್‌ನ ಸೂಪರ್‌ ವೈಸರ್‌ ಅಲ್ವಿನ್‌ ಕ್ರಾಡ್ರಸ್‌ ಹಾಗೂ ಇಲೆಕ್ಟ್ರಿಶಿಯನ್‌ಮಂಜುನಾಥ ರವರ ನಿರ್ಲಕ್ಷತನವೇ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 17/2023 ಕಲಂ:  304(A) Rw 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

Latest Indian news

Popular Stories