ಸಂಸದ ಜಿಗಜಿಣಗಿ ಮಾಜಿ ಡ್ರೈವರ್ ಬರ್ಬರ ಹತ್ಯೆ

ವಿಜಯಪುರ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ‌ ಬರ್ಬರ ಹತ್ಯೆಗೈದಿರುವ ಘಟನೆ ವಿಜಯಪುರದ ಅಲಕುಂಟೆ ‌ನಗರದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಮಲ್ಲಿಕಾರ್ಜುನ ದೊಡಮನಿ (43) ಹತ್ಯೆಯಾಗಿರುವ ದುರ್ದೈವಿ. ಇನ್ನು ಅಪರಿಚಿತರಿಂದ ಕೃತ್ಯ ಎಸೆದು ಪರಾರಿಯಾಗಿದ್ದಾರೆ.

ಅಲ್ಲದೇ, ಹತ್ಯೆಯಾಗಿರುವ ಮಲ್ಲಿಕಾರ್ಜುನ ಈ ಹಿಂದೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ವಾಹನ ಚಾಲಕನಾಗಿ ಕೆಲಸ ಮಾಡಿದ್ದನು. ಕಳೆದ ಮೂರು ವರ್ಷದ ಹಿಂದೆ ಜಿಗಜಿಣಗಿ ಬಳಿ ಕೆಲಸ ಬಿಟ್ಟಿದ್ದನ್ನು. ಅಲ್ಲದೇ,
ಹಣಕಾಸಿನ‌ ವ್ಯವಹಾರವೇ ಮಲ್ಲಿಕಾರ್ಜುನ ಕೊಲೆಗೆ ಕಾರಣ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಆದರ್ಶ ನಗರ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Latest Indian news

Popular Stories