ವಿಜಯಪುರ: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸುಪುತ್ರ, ಬಿಜೆಪಿ ಮುಖಂಡ ಗೋಪಾಲ ಕಾರಜೋಳ ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾದ ಆಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಹಲಸಂಗಿ ಝಡ್ಪಿ ಟಿಕೆಟ್ಗಾಗಿ ಬಿಜೆಪಿ ಮುಖಂಡ ಕಾರಜೋಳ, ಶಿವಾನಂದ ಮಕಣಾಪುರ ಜೊತೆ ಮಾತನಾಡಿದ ಆಡಿಯೋ ಒಂದು ವರ್ಷದ ಹಳೆಯ ಆಡಿಯೋ ತಡವಾಗಿ ಬಹಿರಂಗವಾಗಿದೆ.
ಕರೆ ಸಾರಾಂಶ: ಹಲೋರಿ ಅಣ್ಣಾರ ನಾ ಶಿವಾನಂದ ಮಕಣಾಪುರ ಮಾತಾಡೋದರಿ ಎಂದಿದ್ದಾರೆ. ಅದಕ್ಕೆ ಕಾರಜೋಳ ಹಂ ಹೇಳಪಾ.. ಏನೋ ಏನ್ ತಿಳಕೊಂಡಿ ನಿನ್ನಷ್ಟಕ್ಕ ನೀ.. ಹಚ್ಚಿ ಏನು ಆಟಾ, ಏನ್ ಆಕಾಂಕ್ಷಿ ಎಂದು ವಾಗ್ದಾಳಿ ಮಾಡಿದ್ದು, ಹೀಂಗ? ಯಾರು ಹೊಡಿತಿನಿ ಕಡಿತಿನಿ ಅಂದಾರ್ ನಿನ್ನ ತಮ್ಮಗ ಕೇಳ… ಎಂದು ಕಾರಜೋಳ ಮರು ಪ್ರಶ್ನಿಸಿದ್ದಾರೆ ಅದಕ್ಕೆ ಮತ್ತೆ ಶಿವಾನಂದ ನೀವೆ ಹೇಳಿರಿ ನನ್ನ ತಮ್ಮನೆ ಹೇಳ್ಯಾನ ಎಂದಿದ್ದಾರೆ… ಅದ್ದಕ್ಕೆ ಗೋಪಾಲ್ ಕಾರಜೋಳ ಮತ್ತೇ ಏನೋ ನಿಂದು, ಏನ್ ಮಾಡಾವ ಅದಿದಿ ಎಂದು ಅವಾಜ್ ಹಾಕಿದ್ದಾರೆ. ನನಗೇನಾದ್ರೂ ಕೂದಲು ಕೊಂಕಾದ್ರೆ ಕಾರಜೋಳ ಮನೆತನನೇ ಕಾರಣ ಎಂದು ಶಿವಾನಂದ ಹೇಳಿದ್ದಾರೆ.