“ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ‘ಚಿಕ್ಕ ಮಗುʼವೊಂದು ಇಂದು ಗುರಿಯಾಗುತ್ತಿದೆ – ಉದಯನಿಧಿ ಸ್ಟಾಲಿನ್ ಬೆಂಬಲಿಸಿದ ಕಮಲ ಹಾಸ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರ ಇನ್ನು ಕೂಡ ಕಾದ ಕಬ್ಬಿಣದಂತೆ ಚರ್ಚೆಯಲ್ಲಿರುವಾಗಲೇ ಇದೀಗ ನಟ ಕಮಲ್‌ ಹಾಸನ್‌ ಅವರು ಇದರ ಕುರಿತು ಮಾತನಾಡಿದ್ದಾರೆ.

ಮಕ್ಕಳ್ ನೀಧಿ ಮೈಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಕೊಯಮತ್ತೂರಿನಲ್ಲಿ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ವೇಳೆ ʼಸನಾತನ ಧರ್ಮʼದ ಬಗ್ಗೆ ಮಾತನಾಡಿದ್ದಾರೆ.

“ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ‘ಚಿಕ್ಕ ಮಗುʼವೊಂದು ಇಂದು ಗುರಿಯಾಗುತ್ತಿದೆ” ಎಂದಿದ್ದಾರೆ. ಉದಯನಿಧಿ ಸ್ಟಾಲಿನ್‌ ಅವರ ಹೆಸರು ಬಳಸದೆ ಪರೋಕ್ಷವಾಗಿ ಅವರ ಹೇಳಿಕೆಯ ಪರವಾಗಿ ಕಮಲ್‌ ಹಾಸನ್‌ ನಿಂತಿದ್ದಾರೆ.

“ಸನಾತನ ಧರ್ಮದ ಬಗ್ಗೆ ಸಚಿವರು ಹೇಳಿರುವುದರಲ್ಲಿ ಹೊಸದೇನಿಲ್ಲ. ಈ ಹಿಂದೆ ದ್ರಾವಿಡ ಚಳವಳಿಯ ಹಲವಾರು ನಾಯಕರಾದ ಉದಯನಿಧಿ ಅವರ ತಾತ ಮತ್ತು ದಿವಂಗತ ಡಿಎಂಕೆಯ ಎಂ ಕರುಣಾನಿಧಿ ಅವರು ಮಾತನಾಡಿದ್ದಾರೆ.

ಪೆರಿಯಾರ್ ವಿ ರಾಮಸ್ವಾಮಿ ಅವರು ಜೀವಿಸಿದ ರೀತಿಯಿಂದ ಅವರ ಜೀವನವನ್ನು ಅರ್ಥಮಾಡಿಕೊಳ್ಳಬಹುದು. ಅವರು ಸಾಮಾಜಿಕ ಅನಿಷ್ಠಗಳನ್ನು ಕಟುವಾಗಿ ವಿರೋಧಿಸುತ್ತಿದ್ದರು. ನಮ್ಮಂತವರು ʼಸನಾತನʼ ಎಂಬ ಪದದ ಅರ್ಥವನ್ನು ತಿಳಿದುಕೊಂಡದ್ದೇ ಅವರಿಂದ ಎಂದು ನಟ ಹೇಳಿದ್ದಾರೆ.

ಪೆರಿಯಾರ್ ಅವರು ದೇವಾಲಯದ ಆಡಳಿತಗಾರರಾಗಿದ್ದರು. ಇದಲ್ಲದೆ ಕಾಶಿಯಲ್ಲಿದ್ದಾಗ ಅವರು ಪೂಜೆಯನ್ನು ಮಾಡುತ್ತಿದ್ದರು. ಆದರೆ ಈ ಎಲ್ಲವನ್ನು ಬಿಟ್ಟು ಅವರು ತಮ್ಮ ಜೀವನವನ್ನು ಜನರ ಸೇವೆಗೆ ಮುಡಿಪಾಗಿಟ್ಟರು. ಡಿಎಂಕೆ ಅಥವಾ ಇತರ ಪಕ್ಷಗಳು ಪೆರಿಯಾರ್ ಅವರು ಅವರಿಗೆ ಮಾತ್ರ ಸೀಮಿತವೆಂದು ಹೇಳುತ್ತಾರೆ. ಅವರು ಇಡೀ ತಮಿಳುನಾಡಿಗೆ ನಾಯಕ” ಎಂದು ಕಮಲ್‌ ಹಾಸನ್‌ ಹೇಳಿದರು.

Latest Indian news

Popular Stories