ಸಮಾಜವಾದಿ ಪಕ್ಷದಲ್ಲಿ ವೇದಿಕೆಯ ಮೇಲೆ ಮುಸ್ಲಿಂ ನಾಯಕರಿಗೆ ಅವಕಾಶವಿಲ್ಲ, ಆ ನಾಯಕರಿಗೆ ಮಜ್ಲಿಸ್ ಸೇರಲು ವಿನಂತಿಸುತ್ತೇನೆ – ಅಸಾದುದ್ದೀನ್ ಓವೈಸಿ

ಹೈದರಾಬಾದ್: ಸಹರಾನ್‌ಪುರದಲ್ಲಿ ನಡೆದ ರ್ಯಾಲಿಯಲ್ಲಿ ಸಮಾಜವಾದಿ ಪಕ್ಷವನ್ನು ಗುರಿಯಾಗಿಸಿ ಮಾತನಾಡಿದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ,”ಸನಾಜವಾದಿ ಪಕ್ಷದ ವೇದಿಕೆಯಲ್ಲಿ ಮುಸ್ಲಿಂ ನಾಯಕರಿಗೆ ಸ್ಥಾನವಿಲ್ಲ. ಆ ನಾಯಕರನ್ನು ಮಜ್ಲಿಸ್‌ಗೆ ಸೇರುವಂತೆ ವಿನಂತಿಸುತ್ತೇನೆಂದು ಹೇಳಿದರು.

ಸಹರಾನ್‌ಪುರದಲ್ಲಿ ನಡೆದ ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಅವರಿದ್ದ ರ್ಯಾಲಿಯಲ್ಲಿ ಯಾವುದೇ ಮುಸ್ಲಿಂ ನಾಯಕರಿಗೆ ವೇದಿಕೆಯಲ್ಲಿ ಕುಳಿತುಕೊಳ್ಳುವ ಅವಕಾಶ ನೀಡಿರಲಿಲ್ಲ ಎಂದು ಓವೈಸಿ ಹೇಳಿದ್ದಾರೆ.

ಮಜ್ಲಿಸ್‌ಗೆ ಸೇರಲು ಬಯಸುವ ನಾಯಕರಿಗೆ ನಾನು ಹೇಳಲು ಬಯಸುತ್ತೇನೆ. ನಾನು ನಿಮ್ಮನ್ನು ನನ್ನ ಭುಜದ ಮೇಲೆ ಕೂರಿಸಿಕೊಳ್ಳುತ್ತೇನೆ” ಎಂದು ಎಐಎಂಐಎಂ ಮುಖ್ಯಸ್ಥರು ಹೇಳಿದರು.

“ರ಼್ಯಾಲಿಯಲ್ಲಿ ಮುಸ್ಲಿಮ್ ರಾಜಕಾರಣಿಗಳು ಮೈದಾನದಲ್ಲಿ ಹಾಕಿದ್ದ ಹಾಸಿಗೆಯ ಮೇಲೆ ಕುಳಿತಿದ್ದರು. ಅಖಿಲೇಶ್ ಯಾದವ್ ಸಹರಾನ್‌ಪುರಕ್ಕೆ ಬರುತ್ತಾರೆ.ಅವರ ರಾಜಕಾರಣಿಗಳು ಮರದ ಕೆಳಗೆ ಮೈದಾನದಲ್ಲಿ ಕುಳಿತುಕೊಳ್ಳುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

“ನಾಳೆ ಸಮಾಜವಾದಿ ಪಕ್ಷದ ನಾಯಕರು ಹೌದು ನಾವು ಮುಸ್ಲಿಮರ ನಾಯಕರನ್ನು ವೇದಿಕೆಯಲ್ಲಿ ಕೂರಿಸಿದೆವು ಎಂದು ಹೇಳುತ್ತಾರೆ” ಎಂದು ಅವರು ಅಜಂಗಢದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಸ್ಟೂಲ್ ಮೇಲೆ ಕುಳಿತುಕೊಳ್ಳುವಂತೆ ಮಾಡಿದರು. ಮುಸ್ಲಿಮರನ್ನು ವೇದಿಕೆಯ ಮೇಲೆ ಕುಳಿತುಕೊಳ್ಳುವಂತೆ ಮಾಡಿದರೂ ಸ್ಟೂಲ್ ಮೇಲೆ, ಉಳಿದವರನ್ನು ಸೋಫಾದಲ್ಲಿ ಕುಳಿತುಕೊಳ್ಳುವಂತೆ ಮಾಡಿದರು” ಎಂದು ಓವೈಸಿ ಸಮಾಜವಾದಿ ಪಕ್ಷವನ್ನು ಟೀಕಿಸಿದರು.

ಸಮಾಜವಾದಿ ಪಕ್ಷದಲ್ಲಿ ವೇದಿಕೆಯ ಮೇಲೂ ಮುಸ್ಲಿಂ ನಾಯಕರಿಗೆ ಸ್ಥಾನವಿಲ್ಲ, ಆ ನಾಯಕರಿಗೆ ಮಜ್ಲಿಸ್ (ಎಐಎಂಐಎಂ) ಸೇರುವಂತೆ ಹೇಳಲು ನಾನು ಬಯಸುತ್ತೇನೆ. ನಿಮ್ಮನ್ನು ನನ್ನ ಭುಜದ ಮೇಲೆ ಕೂರಿಸಿಕೊಳ್ಳುತ್ತೇನೆ. ನಾನೇ ನಿಮ್ಮನ್ನು ಹೊತ್ತುಕೊಂಡು ಹೋಗುತ್ತೇನೆ, ನೀವು ಬನ್ನಿ. ನನ್ನ ಭುಜದ ಮೇಲೆ ನನ್ನ ತೋಳುಗಳ ಮೇಲೆ ನಿಂತುಕೊಳ್ಳಿ, ನಾನು ನಿಮಗಾಗಿ ನನ್ನ ಪ್ರಾಣವನ್ನೂ ಕೊಡಲು ಸಿದ್ಧ. ನನ್ನ ದೇಹವು ನಿಮಗೆ ಉಪಯುಕ್ತವಾಗಿದ್ದರೆ ಅದನ್ನು ಬಳಸಿ, ”ಎಂದು ಅವರು ಸಹರಾನ್‌ಪುರದಲ್ಲಿ ನಡೆದ ರ್ಯಾಲಿಯಲ್ಲಿ ಭಾವನಾತ್ಮಕವಾಗಿ ನುಡಿದರು‌.

ಉತ್ತರ ಪ್ರದೇಶ ಚುನಾವಣೆಯಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ 100 ಸ್ಥಾನಗಳಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಜೂನ್‌ನಲ್ಲಿ ಎಐಎಂಐಎಂ ಮುಖ್ಯಸ್ಥರು ಘೋಷಿಸಿದ್ದರು. 2017 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 312 ಸ್ಥಾನಗಳನ್ನು ಭರ್ಜರಿಯಾಗಿ ಗೆದ್ದಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ತಡೆಯಲು ಎಲ್ಲಾ ಸಮಾನ ಮನಸ್ಕ ಪಕ್ಷಗಳು ಒಗ್ಗೂಡಬೇಕೆಂದು ಅವರು ಕರೆ ನೀಡಿದ್ದರು.

Latest Indian news

Popular Stories

error: Content is protected !!