ಸಮಾಜವಾದಿ ಪಕ್ಷದ ಶಾಸಕ ಅಬ್ದಲ್ಲಾ ಅಝಾಮ್’ಗೆ ಎರಡು ವರ್ಷ ಜೈಲು ಶಿಕ್ಷೆ; ಶಾಸಕ‌ ಸ್ಥಾನ ಕಳೆದುಕೊಳ್ಳುವ ಭೀತಿ

ಎಸ್‌ಪಿ ಶಾಸಕ ಅಬ್ದುಲ್ಲಾ ಅಜಂ ಅವರು ಯುಪಿ ವಿಧಾನಸಭೆ ಸದಸ್ಯತ್ವವನ್ನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ವಿಶೇಷ ನ್ಯಾಯಾಲಯ ಸೋಮವಾರ ಅವರಿಗೆ ಮತ್ತು ಅವರ ತಂದೆ, ಪಕ್ಷದ ಹಿರಿಯ ನಾಯಕ ಅಜಂ ಖಾನ್‌ಗೆ 15 ವರ್ಷಗಳ ಹಿಂದಿನ ಪ್ರಕರಣದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಮೊರಾದಾಬಾದ್‌ನಲ್ಲಿ ತಪಾಸಣೆಗಾಗಿ ಅವರ ವಾಹನವನ್ನು ಪೊಲೀಸರು ತಡೆದ ನಂತರ ಸಂಚಾರಕ್ಕೆ ತಡೆ ಒಡ್ಡಿದ ಆರೋಪ ಅವರ ಮೇಲಿತ್ತು.

ಜನವರಿ 1, 2008 ರಂದು ನೆರೆಯ ರಾಮ್‌ಪುರ ಜಿಲ್ಲೆಯ ಸಿಆರ್‌ಪಿಎಫ್ ಶಿಬಿರದ ಮೇಲೆ ಏಳು ಯೋಧರು ಮತ್ತು ರಿಕ್ಷಾ ಎಳೆಯುವವರ ಜೀವವನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ ಇಬ್ಬರು ನಾಯಕರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಅಬ್ದುಲ್ಲಾ ಅವರು ರಾಂಪುರದ ಸೂರ್‌ನ ಶಾಸಕರಾಗಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ, 2013ರ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮುಜಾಫರ್‌ನಗರದ ಸ್ಥಳೀಯ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರು ತಮ್ಮ ಯುಪಿ ಅಸೆಂಬ್ಲಿ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ಶಿಕ್ಷೆಯ ನಂತರ, ಸೈನಿಯ ಕ್ಷೇತ್ರವಾದ ಖತೌಲಿಯನ್ನು ಖಾಲಿ ಎಂದು ಘೋಷಿಸಲಾಯಿತು.

ಸೋಮವಾರ ಅಬ್ದುಲ್ಲಾ ಅಜಂ ಮತ್ತು ಅಜಂ ಖಾನ್ ಮೊರಾದಾಬಾದ್‌ನ ವಿಶೇಷ ಸಂಸದ/ಶಾಸಕ ನ್ಯಾಯಾಲಯದ ಮುಂದೆ ಹಾಜರಾದರು. “ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸ್ಮಿತಾ ಗೋಸ್ವಾಮಿ ಅವರು ಅಜಂ ಖಾನ್ ಮತ್ತು ಅವರ ಮಗ ಅಬ್ದುಲ್ಲಾಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದರು. ಅವರಿಗೂ ತಲಾ 3 ಸಾವಿರ ದಂಡ ವಿಧಿಸಲಾಗಿದೆ. ನಂತರ, ಅಜಂ ಖಾನ್ ಮತ್ತು ಅವರ ಮಗ ಜಾಮೀನು ಅರ್ಜಿ ಸಲ್ಲಿಸಿದರು. ಅದನ್ನು ನ್ಯಾಯಾಲಯ ಪುರಸ್ಕರಿಸಿತು. ಅಗತ್ಯ ಶ್ಯೂರಿಟಿ ಸಲ್ಲಿಸಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಮೊರಾದಾಬಾದ್‌ನ ಜಿಲ್ಲಾ ಸರ್ಕಾರಿ ವಕೀಲ (ಡಿಜಿಸಿ) ನಿತಿನ್ ಗುಪ್ತಾ ಹೇಳಿದರು.

Latest Indian news

Popular Stories