ವಿಜಯಪುರ: ಸರ್ಕಾರಿ ಜಾಗ ಸರ್ವೇ ಮಾಡಲು ಹೋಗಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳ ಮೇಲೆ ಬಿಜೆಪಿ ಮುಖಂಡ ದರ್ಪ ತೋರಿರುವ ಘಟನೆ ವಿಜಯಪುರ ನಗರದ ಶಾಂತಿ ನಿಕೇತನ ಸಂಸ್ಥೆಯ ಬಳಿ ನಡೆದಿದೆ.
ಮಹಾನಗರ ಪಾಲಿಕೆಯ ಅಧಿಕಾರಿಗಳು ಶಾಂತಿ ನಿಕೇತನ ಶಾಲೆಯ ಬಳಿ ಸರ್ಕಾರಿ ಜಾಗ ಸರ್ವೇಗೆ ತೆರಳಿದ್ದಾರೆ. ಈ ವೇಳೆ ಬಿಜೆಪಿ ಮುಖಂಡ ಸುರೇಶ ಬಿರಾದಾರ ಸೇರಿದಂತೆ ಆತನ ಬೆಂಬಲಿಗರು ಅಧಿಕಾರಿಗಳಿಗೆ ಅವಾಚ್ಯ ಶಬ್ದದಿಂದ ನಿಂದಿಸಿ, ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿದ್ದಾರೆ ಆಗ ಸ್ಥಳದಲ್ಲಿದ್ದ ಎಪಿಎಂಸಿ ಪೊಲೀಸ ಠಾಣಾ ಪಿಎಸ್ಐ ಉಳ್ಳಾಗಡ್ಡಿ ಗಲಾಟೆ ಹತೋಟಿಗೆ ತಂದಿದ್ದಾರೆ.
ನೋಟೀಸ್ ನೀಡದೇ ಜಾಗ ಸರ್ವೇ ಮಾಡದಂತೆ ಬಿಜೆಪಿ ಮುಖಂಡ ಬಿರಾದಾರ ವಾದವಾಗಿದೆ. ಆದರೆ ಅಧಿಕಾರಿಗಳ ಮೇಲೆ ಬೆಂಬಲಿಗರು ದರ್ಪ ತೋರಿಸಿದ್ದಾರೆ ಎಂದು ಅಧಿಕಾರಿವೋರ್ವ ಆರೋಪವಾಗಿದೆ.
ಇನ್ನು ಈ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಮೆಕ್ಕಳಕಿ ಮಾಹಿತಿ ನೀಡಿದ್ದಾರೆ.