ಸಿಂದಗಿ ಜೆಡಿಎಸ್ ಅಭ್ಯರ್ಥಿಯಾಗಿ ವಿಶಾಲಾಕ್ಷಿ

ವಿಜಯಪುರ: ಇತ್ತೀಚಿಗೆ ಅಕಾಲಿಕವಾಗಿ ನಿಧನರಾದ ದಿ.ಶಿವಾನಂದ ಪಾಟೀಲ ಸೋಮಜಾಳ ಅವರ ಧರ್ಮಪತ್ನಿ ವಿಶಾಲಾಕ್ಷಿ ಪಾಟೀಲ ಅವರಿಗೆ ಜೆಡಿಎಸ್ ಪಕ್ಷದ ಟಿಕೇಟ್ ಘೋಷಣೆಯಾಗಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಈ ಕುರಿತಂತೆ ಅಧಿಕೃತವಾಗಿ ಘೋಷಣೆ ಮಾಡಿದರು.

ಇಂದು ಸಿಂದಗಿಯಲ್ಲಿ ನಡೆದ ದಿ. ಶಿವಾನಂದ ಪಾಟೀಲರ ಶ್ರದ್ಧಾಂಜಲಿ ಸಭೆಯಲ್ಲಿ ವಿಶಾಲಾಕ್ಷಿ ಶಿವಾನಂದ ಪಾಟೀಲ ಸೋಮಜಾಳ ಅವರಿಗೆ ಟಿಕೇಟ್ ಘೋಷಿಸಿದ್ದಾರೆ.

ಈ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ನನ್ನ ತಂಗಿಯನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ದಿ. ಶಿವಾನಂದ ಪಾಟೀಲರ ಧರ್ಮಪತ್ನಿಯವರಿಗೆ ಆರ್ಶಿವಾದ ಮಾಡಬೇಕೆಂದು ಕೋರಿದರು.

ಟಿಕೇಟ್ ನೀಡುವ ವಿಚಾರವಾಗಿ ನಾನು ಯಾವುದೇ ನಮ್ಮ ಮುಖಂಡರೊಂದಿಗೆ ಚರ್ಚಿಸಿಲ್ಲಾ. ಈ ವೇದಿಕೆಗೆ ಬಂದಾಗ ಆ ಭಗವಂತನ ಪ್ರೇರೆಪಣೆಯಿಂದ, ಸಮಾಜಕ್ಕೆ ಶಿವಾನಂದ ಪಾಟೀಲರು ಸಲ್ಲಿಸಿರುವ ಸೇವೆಗೆ ಗೌರವ ಸಲ್ಲಿಸಲು ವಿಶಾಲಾಕ್ಷಿ ಅವರಿಗೆ ಟಿಕೇಟ್ ನೀಡಲಾಗಿದೆ ಎಂದರು.

Latest Indian news

Popular Stories