ಮೈಸೂರು: ವರುಣಾ ವಿಧಾನಸಭೆ ಕ್ಷೇತ್ರ (Varuna Assembly Constituency) ದಿನೇ ದಿನೇ ರಂಗೇರುತ್ತಿದೆ. ಘಟಾನುಘಟಿ ನಾಯಕರ ನಂತರ ಇದೀಗ ನಟ ನಟಿಯರು ಪ್ರವೇಶ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah )ಅವರು ಇಂದಿನಿಂದ ಎರಡು ದಿನ ವರುಣಾ ಕ್ಷೇತ್ರದಲ್ಲಿ ಪ್ರಚಾರದ ಅಖಾಡಕ್ಕೆ ಧುಮುಕ್ಕಿದ್ದಾರೆ. ಅಲ್ಲದೇ, ಸ್ಯಾಂಡಲ್‌ವುಡ್ ಸ್ಟಾರ್ಗಳನ್ನ (Sandalwood Stars) ಕರೆದು ತರುತ್ತಿದ್ದಾರೆ.
ಸಿದ್ದರಾಮಯ್ಯ ಜೊತೆ ಎಂಟ್ರಿ ಕೊಡ್ತಿರೋ ಕಲಾವಿದರಿಂದ ವರುಣಾ ಮತ್ತಷ್ಟು ಕಲರ್‌ಪುಲ್ ಆಗಲಿದೆ. ಹೌದು, ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಲು ಇವತ್ತು ಸ್ಯಾಂಡಲ್‌ವುಡ್ ನಟ ಡಾ.ಶಿವರಾಜಕುಮಾರ್, ಪತ್ನಿ ಗೀತಾ ಶಿವರಾಜಕುಮಾರ್, ಮೋಹಕತಾರೆ ರಮ್ಯಾ, ಮಾಜಿ ಶಾಸಕ ಮಧು ಬಂಗಾರಪ್ಪ, ಹಾಲಿ ಶಾಸಕರಾದ ಜಮೀರ್ ಅಹಮದ್ ಖಾನ್, ಯತೀಂದ್ರ ಸಿದ್ದರಾಮಯ್ಯ ಅಖಾಡಕ್ಕೆ ಧುಮುಕಲಿದ್ದಾರೆ.
ಇವರೆಲ್ಲರೂ ಸಿದ್ದರಾಮಯ್ಯ ಜೊತೆ ಒಟ್ಟಿಗೆ ರೋಡ್ ಶೋ ಮಾಡಲಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಪರ ಮತಯಾಚನೆ ಮಾಡಲಿದ್ದಾರೆ. ಬೆಳಗ್ಗೆ 9 ಗಂಟೆಗೆ ತಾರಾ ಬಳಗದ ರೋಡ್ ಶೋ ಆರಂಭವಾಗಲಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ 12 ಗ್ರಾಮಗಳಲ್ಲಿ ಮತಶಿಕಾರಿ ನಡೆಸಲಿದ್ದಾರೆ.