ಸಿದ್ದರಾಮಯ್ಯ ಸರಕಾರದ ಆದೇಶಕ್ಕೆ ಪ್ರಮೋದ್ ಮುತಾಲಿಕ್ ಶ್ಲಾಘನೆ!

ಬೆಂಗಳೂರು: ಸಿದ್ದರಾಮಯ್ಯ ಸರಕಾರವನ್ನು ಶ್ರೀರಾಮ ಸೇನಾ ಮುಖ್ಯಸ್ಥ ಶ್ಲಾಘಿಸಿದ್ದಾರೆ. ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಮೊಬೈಲ್ ನಿಷೇಧ ಕ್ರಮವನ್ನು ಅವರು ಸ್ವಾಗತಿಸಿದ್ದು ಈ ಕ್ರಮಕ್ಕಾಗಿ ಸರಕಾರವನ್ನು ಶ್ಲಾಘಿಸಿದ್ದಾರೆ.

ದೇವಸ್ಥಾನಗಳು ಪವಿತ್ರ ಸ್ಥಳವಾಗಿದ್ದು ಅಲ್ಲಿ ಮೊಬೈಲ್ ಬಳಕೆ ನಿಷೇಧಿಸಿರುವುದು ಸ್ವಾಗತಾರ್ಹ. ಖಾಸಗಿ ಆಡಳಿತ ಮಂಡಳಿ ಕೂಡ ಈ ಕ್ರಮವನ್ನು ಅನುಸರಿಸಬೇಕು. ಅದಕ್ಕಾಗಿ ನಮ್ಮ ಕಾರ್ಯಕರ್ತರು ಆಡಳಿತ ಮಂಡಳಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.

Latest Indian news

Popular Stories