ಸಿದ್ಧರಾಮಯ್ಯ ಅವರನ್ನು ತಾಲಿಬಾನ್’ಗೆ ಕಳುಹಿಸಬೇಕು ಎಂದ ಮಾಜಿ ಸಂಸದ ಶೀನಿವಾಸ್ ಪ್ರಸಾದ್

ಮೈಸೂರು : ಉಪ ಚುನಾವಣೆಯಲ್ಲಿ ರಾಜಕೀಯ ಮುಖಂಡರ ವಾಕ್ ಸಮರ ತಾರಕಕ್ಕೇರಿದೆ. ನಾನು ನಿಮ್ಮ ಮಾತುಗಳನ್ನು ಟಿವಿ, ಪೇಪರ್ ನಲ್ಲಿ ನೋಡ್ತಾ ಇದ್ದೇನೆ. ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯನವರನ್ನು ಅಫ್ಘಾನಿಸ್ತಾನದ ತಾಲೀಬಾನ್ ಗೆ ಕಳುಹಿಸಬೇಕು ಎಂದು ಮಾಜಿ ಸಂಸದ ಶ್ರೀನಿವಾಸ್ ಪ್ರಸಾದ್ ಗುಡುಗಿದ್ದಾರೆ.

ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜವಾಬ್ದಾರಿಯನ್ನೇ ಮರೆತಿದ್ದಾರೆ. ಪ್ರಧಾನ ಮಂತ್ರಿಯ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ಅದಕ್ಕೂ ಒಂದು ಗೌರವ ಇದೆ ಎಂಬುದೇ ತಿಳಿಯದವರಂತೆ ಅವಹೇಳನ ರೀತಿ ಮಾತನಾಡಬಾರದು. ಸಿದ್ದರಾಮಯ್ಯ ಅವರನ್ನು ಒಂದು ತಿಂಗಳು ತಾಲಿಬಾನ್ ಗೆ ಕಳುಹಿಸಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

Latest Indian news

Popular Stories

error: Content is protected !!