ಸಿದ್ಧರಾಮೋತ್ಸವ ನಂತರ ಕಾಂಗ್ರೆಸ್ ಫುಲ್ ಚಾರ್ಜ್: ತಿಂಗಳಿಗೊಂದು ಹೋರಾಟಕ್ಕೆ ಮಾಸ್ಟರ್ ಪ್ಲ್ಯಾನ್!

ಬೆಂಗಳೂರು: ಸಿದ್ಧರಾಮೋತ್ಸವದಲ್ಲಿ ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಸಾಧಿಸಿದ ನಂತರ ಇದೀಗ ಸೋಮವಾರ ನಡೆದ ಫ್ರೀಡಮ್‌ ಮಾರ್ಚ್ ಯಶಸ್ವಿಗೊಂಡಿದೆ. ಲಕ್ಷಾಂತರ ಮಂದಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಇದರಿಂದ ಸ್ಪೂರ್ತಿ ಪಡೆದಿರುವ ಕಾಂಗ್ರೆಸ್ ತಿಂಗಳಿಗೊಮ್ಮೆ ಹೋರಾಟ ರೂಪಿಸಲು ಸಿದ್ಧಗೊಂಡಿದೆ.

ಸೆಪ್ಟೆಂಬರ್‍ನಲ್ಲಿ ಕಾಂಗ್ರೆಸ್‍ನಿಂದ ಮತ್ತೊಂದು ಮೆಗಾ ಶೋಗೆ ಸಿದ್ಧತೆ ಈಗಲೇ ಆರಂಭವಾಗಿದೆ.ಸೆಪ್ಟಂಬರ್‌ ನಲ್ಲಿ ರಾಹುಲ್ ಗಾಂಧಿಯ ಭಾರತ್ ಜೋಡೋ ಪಾದಯಾತ್ರೆ ರಾಜ್ಯಕ್ಕೆ ಬರಲಿದೆ. ರಾಜ್ಯದಲ್ಲಿ ಇದೇ ರೀತಿ ಲಕ್ಷ ಲಕ್ಷ ಜನರನ್ನ ಸೇರಿಸಿ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಯಶಸ್ವಿಗೊಳಿಸಲು ಕಾಂಗ್ರೆಸ್ ಪಾಳಯದ ಸಿದ್ಧತೆ ನಡೆಸಿದೆ. ಅದೇ ಪಾದಯಾತ್ರೆ ಮಾದರಿಯಲ್ಲಿ ಆ ನಂತರವು ತಿಂಗಳಿಗೊಂದು ಶಕ್ತಿ ಪ್ರದರ್ಶನ ಮಾಡಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ಯೋಜನೆಯಾಗಿದೆ.

ಮುಂಬರುವ ವರ್ಷದಲ್ಲಿ ವಿಧಾನ ಸಭಾ ಚುನಾವಣೆಯಿದ್ದು ಬಿಜೆಪಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ರಾಜ್ಯದ ಅಭಿವೃದ್ಧಿ ಕಾರ್ಯದಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಕಾಂಗ್ರೆಸ್ ಹೋರಾಟದ ಅಸ್ತ್ರವಾಗಿ ಪರಿಣಮಿಸಿದ್ದು, ಇತ್ತೀಚಿಗೆ ಬಿಜೆಪಿ ಕಾರ್ಯಕರ್ತ ವಲಯದಲ್ಲಿ ಕಾಣಿಸಿಕೊಂಡಿರುವ ಅಸಮಾಧಾನ ಹೊಗೆಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

Latest Indian news

Popular Stories

Social Media Auto Publish Powered By : XYZScripts.com
error: Content is protected !!