ನವದೆಹಲಿ: ದೇಶವನ್ನು ತಲ್ಲಣಗೊಳಿಸಿದ್ದ ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲ ಹತ್ಯಾ ಪ್ರಕರಣದಲ್ಲಿ ಇದೀಗ ಎಂಟು ಮಂದಿ ಶೂಟರ್’ಗಳಲ್ಲಿ ಒಬ್ಬನನ್ನು ಬಂಧಿಸಿರುವ ಕುರಿತು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ವರದಿ ಮಾಡಿರುವ ಎನ್.ಡಿ.ಟಿವಿ, ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರನ್ನು ಗುಂಡಿಕ್ಕಿ ಕೊಂದ ಎಂಟು ಬಂದೂಕುಧಾರಿಗಳಲ್ಲಿ ಮೊದಲನೆಯವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬಟಿಂಡಾ ನಿವಾಸಿ ಹರ್ಕಮಲ್ ರಾನು ಎಂಬಾತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಆತನ ಕುಟುಂಬಸ್ಥರು ಹೇಳಿದ್ದಾರೆ.
ಪ್ರಕರಣದಲ್ಲಿ ಇದು ಹತ್ತನೇ ಬಂಧನವಾಗಿದೆ.