ಸಿರಿಯಾದಲ್ಲಿ ಭೂಕಂಪದ ಮೇಲೆ ಅವಶೇಷಗಳಡಿಯೇ ಜನ್ಮ ತಾಳಿದ ಕಂದಮ್ಮ; ತಾಯಿಲ್ಲದ ಹಸುಗೂಸನ್ನು ದತ್ತು ಪಡೆಯಲು ಜಗತ್ತಿನಾದ್ಯಂತ ಮುಗಿ ಬಿದ್ದ ಜನ

ಸಿರಿಯಾದ ಭೂಕಂಪ ಅಲ್ಲಿನ ಜನ ಬದುಕನ್ನು ಹೇಗೆ ಹಿಂಡಿ ಹಿಪ್ಪೆ ಮಾಡಿದೆ ಅನ್ನೋದನ್ನು ನಾವು ಪ್ರತಿ ದಿನ ನೋಡುತ್ತಲೇ ಇದ್ದೇವೆ. ಒಂದೊಂದು ದೃಶ್ಯಗಳು ಕೂಡ ಹೃದಯವಿದ್ರಾವಕ. ಅದರಲ್ಲೂ ಹುಟ್ಟುತ್ತಲೇ ಕಂದಮ್ಮನನ್ನು ಕಳೆದುಕೊಂಡ ಮಗುವಿನ ಕಥೆಯಂತೂ ಕಣ್ಣೀರು ತರಿಸುತ್ತೆ.

ಸಿರಿಯಾದ ಜಿಂದಾಯ್ರಿಸ್ ಪಟ್ಟಣದಲ್ಲಿ ಕಾರ್ಯಾಚರಣೆ ವೇಳೆ ಕಟ್ಟಡದ ಅವಶೇಷಗಳಡಿಯಲ್ಲಿ ಈ ನವಜಾತ ಶಿಶು ಪತ್ತೆಯಾಗಿತ್ತು.ಆ ಮಗು ಪತ್ತೆಯಾದಾಗ ಅದರ ಹೊಕ್ಕಳ ಬಳ್ಳಿ ಕೂಡ ತಾಯಿಯಿಂದ ಬೇರ್ಪಟ್ಟಿರಲಿಲ್ಲ.ಇದರಿಂದಾಗಿ ಭೂಕಂಪದ ಅವಶೇಷಗಳಲ್ಲಿ ರಕ್ಷಿಸಲ್ಪಟ್ಟ ಈ ಮಗುವಿಗೆ ಅಯಾ ಎಂದು ಹೆಸರು ಇಡಲಾಗಿದೆ. ಅಯಾ ಎಂದರೆ ಅರೇಬಿಕ್ ಭಾಷೆಯಲ್ಲಿ ಪವಾಡ ಎಂದರ್ಥ.ಮಗುವಿನ ರಕ್ಷಣೆ ವಿಚಾರ ಇಡೀ ಜಗತ್ತಿನಲ್ಲಿ ಭಾರೀ ಅಚ್ಚರಿ ಮೂಡಿಸಿದೆ.

ಭೂಕಂಪನದಲ್ಲಿ ಶಿಶುವಿನ ತಾಯಿ, ತಂದೆ ಮತ್ತು ಆಕೆಯ ನಾಲ್ವರು ಒಡಹುಟ್ಟಿದವರು ಮೃತಪಟ್ಟಿದ್ದಾರೆ.ಮಗುವನ್ನು ಇದೀಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಇದರ ಬೆನ್ನಲ್ಲೇ ಜಗತ್ತಿನಾದ್ಯಂತ ಹಲವರು‌ ಮಗುವನ್ನು ದತ್ತು ಪಡೆದುಕೊಳ್ಳಲು ಮುಂದಾಗಿದ್ದಾರೆ.

Latest Indian news

Popular Stories