ಮಂಗಳೂರು: ನಗರದ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವೊಂದು ಪತ್ತೆಯಾಗಿದೆ.
ಮಗುವಿನ ಪೋಷಕರು ಬಿಟ್ಟು ಹೋಗಿರುವ ಬಗ್ಗೆ ಶಂಕೆ
ವ್ಯಕ್ತವಾಗಿದೆ. ಸುರತ್ಕಲ್ ನ ಸದಾನಂದ ಹೋಟೆಲ್ ಬಳಿ ಈ ಹೆಣ್ಣು ಮಗುವನ್ನು ಪೋಷಕರು ಬಿಟ್ಟು ಹೋಗಿದ್ದಾರೆ. ಮಗು ಒಂಟಿಯಾಗಿರುವುದನ್ನು ಗಮನಿಸಿ ಸಾರ್ವಜನಿಕರು ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ.
ಸದ್ಯ ಈ ಮಗುವಿಗೆ ಸಂಬಂಧಪಟ್ಟವರು ದಯವಿಟ್ಟು ಈ
ಕೆಳಕಂಡ ಸುರತ್ಕಲ್ ಠಾಣೆಯ ಫೋನ್ ನಂಬರ್ ಗಳಿಗೆ
ಸಂಪರ್ಕಿಸಿ ಎಂದು ಪೊಲೀಸ್ ಇಲಾಖೆ ಮನವಿ
ಮಾಡಿದೆ.