ಸೋಟಿಗಂಜ್ ಸ್ಕ್ರ್ಯಾಪ್ ಮಾರುಕಟ್ಟೆ ಬಂದ್ – ಬಿಕ್ಕಟ್ಟಿಗೆ ಸಿಲುಕಿದ ನೂರಾರು ಮಂದಿ

ಭಾರತದ ಅತಿದೊಡ್ಡ ಸ್ಕ್ರ್ಯಾಪ್ ಮಾರುಕಟ್ಟೆಗಳಲ್ಲಿ ಒಂದಾದ ಮೀರತ್‌ನ ಸೋಟಿಗಂಜ್ ಸ್ಕ್ರ್ಯಾಪ್ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಮೀರತ್‌ನ ಈ ಜಂಕ್ ಮಾರುಕಟ್ಟೆಯು ಕದ್ದ ವಾಹನಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಮತ್ತು ವಾಹನಗಳನ್ನು ಕತ್ತರಿಸಲು ಕುಖ್ಯಾತವಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 18 ರಂದು ಶಹಜಹಾನ್‌ಪುರದಲ್ಲಿ ನೀಡಿದ ತಮ್ಮ ಭಾಷಣದಲ್ಲಿ ಈ ಮಾರುಕಟ್ಟೆಯ ಮುಚ್ಚುವಿಕೆಯ ಬಗ್ಗೆ ಪ್ರಸ್ತಾಪಿಸಿದರು. ಮತ್ತೊಂದೆಡೆ, ಮಾರುಕಟ್ಟೆಯನ್ನು ಮುಚ್ಚಿರುವುದರಿಂದ, ಸೋಟಿಗಂಜ್‌ನ 400 ಕ್ಕೂ ಹೆಚ್ಚು ಅಂಗಡಿಗಳಲ್ಲಿ ಕೆಲಸ ಮಾಡುವ 1,000 ಕ್ಕೂ ಹೆಚ್ಚು ಜನರು ಜೀವನೋಪಾಯದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ.

ಸೋಟಿಗಂಜ್ ಮಾರುಕಟ್ಟೆಯನ್ನು ಮುಚ್ಚಿರುವುದು ಯೋಗಿ ಸರ್ಕಾರದ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಬಣ್ಣಿಸಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೆಲವರ ಅಪರಾಧಕ್ಕೆ ಇಡೀ ಮಾರುಕಟ್ಟೆಯೇ ಶಿಕ್ಷೆ ಅನುಭವಿಸುತ್ತಿರುವುದು ಸರಿಯಲ್ಲ ಎನ್ನುತ್ತಾರೆ ಸೋಟಿಗಂಗೆಯ ವ್ಯಾಪಾರಿಗಳು.

ಕೆಲವರು ಇಲ್ಲಿ ಕದ್ದ ವಾಹನಗಳಿಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರು. ಆದರೆ ಅವರೆಲ್ಲ ಜೈಲು ಪಾಲಾಗಿದ್ದಾರೆ.ಆಗ ಇಡೀ ಮಾರುಕಟ್ಟೆ ಬಂದ್ ಮಾಡುವ ನಿರ್ಧಾರ ಸರಿಯಲ್ಲ ಎಂದು ಹೇಳಿದ್ದಾರೆ.

Latest Indian news

Popular Stories

error: Content is protected !!