ಬೆಂಗಳೂರು: ಪರ್ಯಾಯ ಮಾಧ್ಯಮವಾಗಿ ರೂಪುಗೊಂಡ ದಿ ಹಿಂದುಸ್ತಾನ್ ಗಝೆಟ್ ಸ್ಥಾಪನೆಯಾದ ಒಂದೇ ವರ್ಷದಲ್ಲಿ ಜನಮನ್ನಣೆ ಗಳಿಸಿದೆ. ಮುಖ್ಯವಾಹಿನಿಗಳು ಸರಕಾರದ ಪರ, ಪ್ರಬಲ ಪರ ಧ್ವನಿಯಾಗುತ್ತಿರುವ ಈ ಸಂದರ್ಭದಲ್ಲಿ ದಿ ಹಿಂದುಸ್ತಾನ್ ಗಝೆಟ್ ಶೋಷಿತರ ಪರವಾದ ಮಾಧ್ಯಮವಾಗಿ ಹೊರಹೊಮ್ಮಿದೆ ಎಂದು ದೇಶದ ಖ್ಯಾತ ಮ್ಯಾಗ್’ಝಿನ್ ಔಟ್’ಲುಕ್ ವರದಿ ಮಾಡಿದೆ.

ಬಹುಸಂಖ್ಯಾತ ಸಮಾಜದ ನಿರೂಪಣೆಯ ನಡುವೆ ದೇಶದ ಕೆಲವು ಮಾಧ್ಯಮಗಳು, ಅಲ್ಪಸಂಖ್ಯಾತರ, ಶೋಷಿತರ ಧ್ವನಿಯಾಗಿ ಕೆಲಸ ಮಾಡುತ್ತಿದ್ದು, ಅದರಲ್ಲಿ ಮುಖ್ಯವಾಗಿ TwoCircles.net (2006), ನಂತರ ಮುಸ್ಲಿಂ ಮಿರರ್ (2012), ಮಕ್ತೂಬ್ ಮೀಡಿಯಾ (2014) ಮತ್ತು ಕ್ಲಾರಿಯನ್ ಇಂಡಿಯಾ (2013). ಹಲವಾರು ವರ್ಷಗಳಿಂದ, TCN ಮುಸ್ಲಿಂ ಮಾಧ್ಯಮಗಳಲ್ಲಿ ಪ್ರಮುಖ ಧ್ವನಿಯಾಗಿತ್ತು, ಆದರೆ ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳ ಒಂದು ವಿಭಾಗವು ಸಮುದಾಯವನ್ನು ತಪ್ಪಾಗಿ ಚಿತ್ರಿಸುತ್ತಿದೆ ಎಂದು ಸಮುದಾಯವು ಭಾವಿಸಿದಾಗ ಮಾಧ್ಯಮಗಳ ಸಂಖ್ಯೆಯು ಬೆಳೆಯಿತು. ಹೊಸ ಮುಸ್ಲಿಂ-ಚಾಲಿತ ಪೋರ್ಟಲ್‌ಗಳಲ್ಲಿ ಮಿಲ್ಲತ್ ಟೈಮ್ಸ್ (2016), ದಿ ಕಾಗ್ನೇಟ್ (2018), ದಿ ಹಿಂದುಸ್ತಾನ್ ಗೆಜೆಟ್ (2021) ಮತ್ತು ಮಕ್ತೂಬ್ ಮೀಡಿಯಾ (2014) ಸೇರಿವೆ ಎಂದು ಔಟ್ ಲುಕ್ ವರದಿ ಮಾಡಿದೆ.
ದೊಡ್ಡ ಮಾಧ್ಯಮ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ವರದಿ ಮಾಡಲು ಅವಕಾಶಗಳನ್ನು ನೀಡುತ್ತವೆ.ಆದರೆ ಸಣ್ಣ “ಪೋರ್ಟಲ್‌ಗಳು ಹೊಸ ಪತ್ರಕರ್ತರಿಗೆ ಆಧಾರವಾಗಿದೆ” ಎಂದು ಹಿಂದೂಸ್ತಾನ್ ಗೆಜೆಟ್‌ನ ರಬಿಯಾ ಶಿರೀನ್ ಔಟ್’ಲುಕ್ ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇಂದು ದಿ ಹಿಂದುಸ್ತಾನ್ ಗಝೆಟ್ ತಂಡ ಶೋಷಿತರ ಧ್ವನಿಯಾಗಿ ಕೆಲಸ ಮಾಡಲು ಹೆಮ್ಮೆ ಪಡುತ್ತದೆ. ಇಂತಹ ಅವಕಾಶ ಕಲ್ಪಿಸಿದ ಎಲ್ಲ ಓದುಗರಿಗೆ ನಮ್ಮ ತಂಡ ಕೃತಜ್ಞತೆ ಸಲ್ಲಿಸುತ್ತದೆ.