ಸ್ಯಾಂಟ್ರೋ ರವಿಯನ್ನು ಶೀಘ್ರ ಬಂಧಿಸಲಾಗುತ್ತದೆ – ಗೃಹ ಸಚಿವ ಅರಗ ಜ್ಞಾನೇಂದ್ರ

ಸ್ಯಾಂಟ್ರೋ ರವಿ ಶೀಘ್ರ ಬಂಧನವಾಗುತ್ತದೆ. ಒಂದೆರಡು ದಿನಗಳಲ್ಲಿ ಆತನನ್ನು ಅರೆಸ್ಟ್ ಮಾಡಲಾಗುತ್ತದೆ. ಆತ ಯಾವ ಬಿಲದಲ್ಲಿ ಹೊಕ್ಕಿದ್ದರು ಬಿಡೋದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಸ್ಯಾಂಟ್ರೋ ರವಿ ಬಂಧನ ವಿಳಂಬ ವಿಚಾರದ ಕುರಿತ ಮಾಧ್ಯಮದವರ ಪ್ರಶ್ನೆಗೆ ಉಡುಪಿಯಲ್ಲಿಂದು ಉತ್ತರಿಸಿದ ಅವರು, ಸ್ಯಾಂಟ್ರೋ ರವಿ ನನ್ನ ಜೊತೆ ಆತ ಫೋಟೋ ತೆಗೆಸಿಕೊಂಡಿರಬಹುದು. ನೂರಾರು ಜನ ಬರುತ್ತಾರೆ, ಫೋಟೋ ತೆಗೆಸಿಕೊಳ್ಳುತ್ತಾರೆ. ಫೋಟೋ ತೆಗೆಸಿಕೊಳ್ಳುವವರಿಗೆ ಬೇಡ ಎನ್ನಲಾಗುವುದಿಲ್ಲ. ನಮ್ಮದು ಒಂಥರಾ ಸಿನಿಮಾ ನಟರ ಗ್ರೇಡ್ ಆಗಿದೆ. ಜನ ಪ್ರೀತಿಯಿಂದ ಹತ್ತಿರ ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ. ಈಗಲೂ ಕೂಡ ಸ್ಯಾಂಟ್ರೋ ರವಿ ಎದುರು ಬಂದು ನಿಂತರೆ ನನಗೆ ಗುರುತ ಆಗಲ್ಲ ಎಂದರು.

ಆತ ಎಲ್ಲಿ ಇದ್ದರೂ ಬಿಡಲ್ಲ. ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದಾರೆ. ಇರೋದ್ರಲ್ಲಿ ಆತ ಸ್ವಲ್ಪ ಬುದ್ಧಿವಂತ. ಹಾಗಾಗಿ ಪದೇ ಪದೇ ಸ್ಥಳ ಬದಲಾಯಿಸುತ್ತಿರುತ್ತಾನೆ. ಆತ ಇಪ್ಪತ್ತು ವರ್ಷದಿಂದ ಈ ಕೆಲಸ ಮಾಡುತ್ತಿದ್ದಾನೆ. ಮೈಸೂರಲ್ಲಿ ಆತನ ವಿರುದ್ಧ ರೌಡಿ ಲಿಸ್ಟ್ ಇದೆ. ಆತನ ವಿರುದ್ಧ ಗೂಂಡಾ ಆಕ್ಟ್ ಕೂಡ ಹಾಕಿದ್ದರು. ಯಾರ ಯಾರ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ ಏನು ವ್ಯವಹಾರ ಅವ ಬಾಯಿ ಬಿಟ್ಟ ನಂತರ ಗೊತ್ತಾಗುತ್ತದೆ. ಆತನ ಬಗ್ಗೆ ಸುಳಿವು ಸಿಗುತ್ತಿದೆ. ಶೀಘ್ರ ಬಂಧನ ಮಾಡುತ್ತೇವೆ ಎಂದು ಅವರು ತಿಳಿಸಿದರು

Latest Indian news

Popular Stories