ಹಣದುಬ್ಬರ ಎಫೆಕ್ಟ್: ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ, ಪ್ರತೀ ಡಾಲರ್ ಗೆ 77.40ರೂ!

ಮುಂಬೈ: ದೇಶದ ಹಣದುಬ್ಬರ ಪರಿಣಾಮ ಭಾರತೀಯ ರೂಪಾಯಿ ಮೌಲ್ಯ ಕುಸಿದಿದ್ದು, ಪ್ರತೀ ಡಾಲರ್ ಗೆ 77.40ರೂಗೆ ಮೌಲ್ಯ ಕುಸಿದಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಬರೊಬ್ಬರಿ 52 ಪೈಸೆ ಇಳಿಕೆ ದಾಖಲಿಸಿದೆ. ಆ ಮೂಲಕ ರೂಪಾಯಿ ಮೌಲ್ಯ ಪ್ರತೀ ಡಾಲರ್ ಎದುರು 77.42ಕ್ಕೆ ಕುಸಿತಗೊಂಡಿದೆ.

ವಿದೇಶಿ ಬಂಡವಾಳದ ಹೊರಹರಿವು, ಸಾಗರೋತ್ತರ ಮಾರುಕಟ್ಟೆಯಲ್ಲಿ ಡಾಲರ್‌ಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದ್ದರ ಪರಿಣಾಮವಾಗಿ ರೂಪಾಯಿ ಮೌಲ್ಯ ಕುಸಿತ ಕಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ 55 ಪೈಸೆ ಇಳಿಕೆ ಕಂಡಿದ್ದ ರೂಪಾಯಿ ಒಂದು ಡಾಲರ್‌ಗೆ 76.90ರಂತೆ ವಿನಿಮಯವಾಗುತ್ತಿದೆ

ಜಾಗತಿಕ ಕೇಂದ್ರ ಬ್ಯಾಂಕ್‌ಗಳ ಬಡ್ಡಿ ದರ ಹೆಚ್ಚಳ ಪ್ರಚೋದಿಸುವ ಹಣದುಬ್ಬರದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ ರೂಪಾಯಿ ಮೌಲ್ಯ ಕುಸಿದಿದೆ.

Latest Indian news

Popular Stories