ಹರ್ಯಾಣ | ಸರ್ಕಾರಿ ಆಸ್ಪತ್ರೆಗಳಲ್ಲಿ ಡ್ರೆಸ್ ಕೋಡ್: ಫಂಕಿ ಹೇರ್ ಸ್ಟೈಲ್, ಮೇಕಪ್, ಉದ್ದನೆಯ ಉಗುರುಗಳಿಗೆ ಬ್ರೇಕ್

ಚಂಡೀಗಢ (ಪಿಟಿಐ): ಆಸ್ಪತ್ರೆಗಳಲ್ಲಿನ ಸಿಬ್ಬಂದಿಗಳ “ಫಂಕಿ ಹೇರ್‌ಸ್ಟೈಲ್‌ಗಳು, ಭಾರವಾದ ಆಭರಣಗಳು, ಮೇಕಪ್ ಮತ್ತು ಉದ್ದನೆಯ ಉಗುರುಗಳು” ಸ್ವೀಕಾರಾರ್ಹವಲ್ಲ ಎಂದಿರುವ ಹರಿಯಾಣ ಸರ್ಕಾರವು ಆರೋಗ್ಯ ವೃತ್ತಿಪರರಿಗೆ “ಉತ್ತಮವಾಗಿ ಅನುಸರಿಸುವ” ಡ್ರೆಸ್ ಕೋಡ್ ನೀತಿಯನ್ನು ಸಿದ್ಧಪಡಿಸುತ್ತಿದೆ ಎಂದು ತಿಳಿಸಿದೆ.

ಡ್ರೆಸ್ ಕೋಡ್ ನೀತಿಯ ಉದ್ದೇಶ, ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿನ ಸಿಬ್ಬಂದಿಗಳಲ್ಲಿ ಶಿಸ್ತು, ಏಕರೂಪತೆ ಮತ್ತು ಸಮಾನತೆಯನ್ನು ಕಾಪಾಡುವುದು ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳುತ್ತಾರೆ.

“ಆಸ್ಪತ್ರೆಯಲ್ಲಿ ಉತ್ತಮವಾಗಿ ಅನುಸರಿಸಲಾದ ಡ್ರೆಸ್ ಕೋಡ್ ನೀತಿಯು ಉದ್ಯೋಗಿಗೆ ತನ್ನ ವೃತ್ತಿಪರ ಇಮೇಜ್ ಅನ್ನು ನೀಡುವುದಲ್ಲದೆ, ಸಾರ್ವಜನಿಕರಲ್ಲಿ ಸಂಸ್ಥೆಯೊಂದರ ಸೊಗಸಾದ ಚಿತ್ರವನ್ನು ಪ್ರಸ್ತುತಪಡಿಸುತ್ತದೆ” ಎಂದು ವಿಜ್ ಶುಕ್ರವಾರ ಹೇಳಿದರು.

ಕ್ಲಿನಿಕಲ್ (ವೈದ್ಯರು ಮತ್ತು ಅರೆವೈದ್ಯರು), ಸ್ವಚ್ಛತೆ ಮತ್ತು ನೈರ್ಮಲ್ಯ, ಭದ್ರತೆ, ಸಾರಿಗೆ, ತಾಂತ್ರಿಕ, ಅಡುಗೆಮನೆ, ಕ್ಷೇತ್ರ ಇತ್ಯಾದಿಗಳಲ್ಲಿ ಕೆಲಸ ಮಾಡುವ ಎಲ್ಲಾ ಆಸ್ಪತ್ರೆಯ ಸಿಬ್ಬಂದಿ ಕೆಲಸದ ಸಮಯದಲ್ಲಿ ಸರಿಯಾದ ಸಮವಸ್ತ್ರದಲ್ಲಿರಬೇಕು ಎಂದು ಅವರು ಹೇಳಿದರು.

ವಿಶೇಷವಾಗಿ ಆರೋಗ್ಯ ಕೇಂದ್ರಗಳಲ್ಲಿ ಫಂಕಿ ಹೇರ್ ಸ್ಟೈಲ್, ಹೆವಿ ಜ್ಯುವೆಲ್ಲರಿ, ಆಕ್ಸೆಸರೀಸ್, ಮೇಕ್ಅಪ್, ಉದ್ದನೆಯ ಉಗುರುಗಳು ಕೆಲಸದ ವೇಳೆ ಸ್ವೀಕಾರಾರ್ಹವಲ್ಲ ಎಂದು ವಿಜ್ ಹೇಳಿದ್ದಾರೆ.

ಶುಶ್ರೂಷಾ ಸಿಬ್ಬಂದಿಯನ್ನು ಹೊರತುಪಡಿಸಿ, ಬಿಳಿ ಅಂಗಿಯೊಂದಿಗೆ ಕಪ್ಪು ಪ್ಯಾಂಟ್ ಮತ್ತು ಹೆಸರಿನ ಟ್ಯಾಗ್ ಅನ್ನು ತರಬೇತಿ ಪಡೆದವರು ಧರಿಸಬೇಕು ಎಂದು ಅವರು ಹೇಳಿದರು.

“ಪುರುಷರ ಕೂದಲು ಕಾಲರ್ ಗಿಂತ ಉದ್ದವಾಗಿರಬಾರದು ಮತ್ತು ರೋಗಿಯ ಆರೈಕೆಯಲ್ಲಿ ಸಮಸ್ಯೆ ಸೃಷ್ಟಿಸಬಾರದೆಂದು” ಅವರು ಹೇಳಿದರು.

Latest Indian news

Popular Stories