ಜೈಪುರ್: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ(ಫೆ.10) ವಿಧಾನಸಭೆಯಲ್ಲಿ ನಗೆಪಾಟಲಿಗೆ ಈಡಾದ ಪ್ರಸಂಗ ನಡೆಯಿತು. ಅದಕ್ಕೆ ಕಾರಣ ಗೆಹ್ಲೋಟ್, ಈ ಸಾಲಿನ ಬಜೆಟ್ ಓದುವ ಬದಲು ಹಿಂದಿನ ವರ್ಷದ ಬಜೆಟ್ ಓದಿರುವುದು!
ವಿಧಾನಸಭೆಯಲ್ಲಿ ಸಿಎಂ ಅಶೋಕ್ ಗೆಹ್ಲೋಟ್, ಬಜೆಟ್ ಮಂಡಿಸಲು ಆರಂಭಿಸಿದ್ದರು. ಸುಮಾರು ಎಂಟು ನಿಮಿಷಗಳ ಬಳಿಕ ಕಾಂಗ್ರೆಸ್ ಸಚಿವ ಮಹೇಶ್ ಜೋಶಿ ಅವರು ಗೆಹ್ಲೋಟ್ ಬಳಿ ಬಂದು, ಸರ್..ನೀವು ಹಿಂದಿನ ವರ್ಷದ ಬಜೆಟ್ ಓದುತ್ತಿದ್ದೀರಿ, ಭಾಷಣ ನಿಲ್ಲಿಸಿ ಎಂದು ಗಮನಕ್ಕೆ ತಂದಿದ್ದರು!
ಬಜೆಟ್ ಮಂಡಿಸಿದ ಗೆಹ್ಲೋಟ್ ಕಳೆದ ವರ್ಷ ಜಾರಿಗೆ ತಂದ ಹಳೆಯ ಯೋಜನೆಗಳು ಮತ್ತು ನಗರಾಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸಿದ್ದರು. ಆಗ ವಿಪಕ್ಷಗಳು ಗದ್ದಲ ಎಬ್ಬಿಸಿದ್ದು, ಬಳಿಕ ಕಾಂಗ್ರೆಸ್ ಮುಖಂಡ ಜೋಶಿ ಅವರು ಗೆಹ್ಲೋಟ್ ಅವರ ಗಮನಕ್ಕೆ ವಿಚಾರದ ತಂದ ನಂತರ ಮುಖ್ಯಮಂತ್ರಿ ಪ್ರಮಾದಕ್ಕೆ ಕ್ಷಮೆಯಾಚಿಸಿದ್ದ ಘಟನೆ ನಡೆಯಿತು.