ಹಾವೇರಿಯಲ್ಲಿ ‘ಅಕ್ಷರ ಜಾತ್ರೆ’ : ಧ್ವಜಾರೋಹಣ ನೆರವೇರಿಸಿದ ಸಚಿವ ಶಿವರಾಂ ಹೆಬ್ಬಾರ್

ಏಲಕ್ಕಿ ನಗರಿ ಹಾವೇರಿಯಲ್ಲಿ ಕನ್ನಡ ಕಹಳೆ ಮೊಳಗಿದ್ದು, ಇಂದಿನಿಂದ ಮೂರು ದಿನ ಅಕ್ಷರ ಜಾತ್ರೆ ನಡೆಯಲಿದೆ.

ಇಂದಿನಿಂದ ಮೂರು ದಿನ ಸಮ್ಮೇಳನ ನಡೆಯಲಿದೆ. ಈ ವೇಳೆ ಮಾತನಾಡಿದ ಹೆಬ್ಬಾರ್ ನೆಲ, ಜಲ ಭಾಷೆ ವಿಚಾರದಲ್ಲಿ ರಾಜಿಯೇ ಇಲ್ಲ ಎಂದರು. ಸಿಎಂ ಸೇರಿ ಅತಿಥಿಗಳ ಭಾಷಣಕ್ಕೆ ಸಮಯ ನಿಗದಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಸಾಹಿತಿಗಳ ಭಾಷಣಕ್ಕೂ ಸಮಯ ನಿಗದಿ ಮಾಡಲಿ ಎಂದರು.

ಹಾವೇರಿಯ ಹೊರವಲಯದ ಅಜ್ಜಯ್ಯ ಗುಡಿಯ ಹತ್ತಿರ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಜರ್ಮನ್ ತಂತ್ರಜ್ಞಾನವನ್ನ ಬಳಿಸಿ ಪ್ರಧಾನ ವೇದಿಕೆ ಹಾಗೂ ಪುಸ್ತಕ ಮಳಿಗೆ, ವಸ್ತು ಪ್ರದರ್ಶನ ಮಾಡಲಾಗಿದೆ. ಸಮ್ಮೆಳನಕ್ಕೆ ಬರುವ ಲಕ್ಷಾಂತರ ಜನರಿಗೆ ಊಟ ಹಾಗೂ 70 ಸಾವಿರ ಜನರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬ ಬಗೆ ಬಗೆಯಾದ ಊಟ ಸಿದ್ದವಾಗಲಿದೆ. ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು, ಬೆಲ್ಲದ ಟೀ, , ಬೆಲ್ಲದ ಟೀ ನೀಡಲಾಗುತ್ತದೆ. ಹಾಗೂ 1.5 ಲಕ್ಷ ಜನರಿಗೆ ಮಧ್ಯಾಹ್ನ ಊಟ, ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಯಾ, ಚಪಾತಿ, ಅನ್ನ, ಮೊಸರು, ಸಾಂಬಾರ್, ಉಪ್ಪಿನ ಕಾಯಿ, ಶೇಂಗಾ ಚಟ್ನಿ ನೀಡಲಾಗುತ್ತಿದೆ.

Latest Indian news

Popular Stories