ನವದೆಹಲಿ: ವೇದಿಕೆಯಲ್ಲಿಯೇ ಚಪ್ಪಲಿಯಿಂದ ಥಳಿಸಿದ
ಮಹಿಳೆಯ ವಿಡಿಯೋ ವೈರಲಾಗಿದೆ. ದೆಹಲಿಯಲ್ಲಿ ಹಿಂದೂ ಏಕತಾ ಮಂಚ್ಬಆಯೋಜಿಸಿದ್ದ ಬೇಟಿ ಬಚಾವೋ ಮಹಾ ಪಂಚಾಯತ್ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬಳು ತಾಳ್ಮೆ
ಕಳೆದುಕೊಂಡಿದ್ದಾರೆ. ನಂತರ ತನ್ನ ಭಾಷಣ ತಡೆಯಲು ಯತ್ನಿಸಿದ ಹಿಂದೂ ಮುಖಂಡನಿಗೆ ಕಪಾಳ ಮೋಕ್ಷ ಮಾಡಲಾಗಿದೆ.
ಆಕೆ ಹೊಡೆದ ವ್ಯಕ್ತಿ ಆಕೆಯ ಮಗಳ ಮಾವನಾಗಿದ್ದ ಆತ ಮಗಳಿಗೆ ನೀಡುತ್ತಿದ್ದ ಕಿರುಕುಳವೇ ಇದಕ್ಕೆ ಕಾರಣವೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮಹಿಳೆವೇದಿಕೆ ಮೇಲೆರಿ ತಮ್ಮ ಸಮಸ್ಯೆಯನ್ನು ಹೇಳುತ್ತಿದ್ದಾಗ ಸಂಘಟಕರು ಮಹಿಳೆಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಕೋಪಿತಳಾದ ಆಕೆ ತನ್ನ ಚಪ್ಪಲಿಯಿಂದ ಸಂಘಟಕನನ್ನು ಥಳಿಸಿದ್ದಾರೆ.
ಈ ವೇಳೆ ಹಲವರು ಮಹಿಳೆಯನ್ನು ತಡೆಯಲು
ಯತ್ನಿಸಿದರೂ ಕೇಳದೆ ಹಲ್ಲೆ ನಡೆಸಿದ್ದಾಳೆ. ಸದ್ಯ ಈ
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೇಟಿ ಬಚಾವೋ ಕಾರ್ಯಕ್ರಮದಲ್ಲೇ ಹಿಂದೂ ಮುಖಂಡನ ಮನೆಯ ವಿಚಾರ ಬಹಿರಂಗವಾಗಿ ಮುಖಭಂಗವಾಗಿದೆ.