ಉಡುಪಿ: ಮುಸ್ಲಿಮ್ ಸಂಘಟನೆಗಳು ತರಗತಿಯಲ್ಲಿ ಹಿಜಾಬ್ ನಿಷೇಧ ವಿರೋಧಿಸಿ ರಾಜ್ಯ ಬಂದ್’ಗೆ ಕರೆ ನೀಡಿದ್ದವು. ಹಿಜಾಬ್ ವಿವಾದ ಭುಗಿಲೆದ್ದ ಉಡುಪಿ ನಗರದಲ್ಲಿ ಹಲವು ಅಂಗಡಿ ಮುಗ್ಗಟ್ಟುಗಳು ಮುಚ್ಚಿ ಬಂದ್’ಗೆ ಸ್ಪಂದಿಸಿವೆ.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬಂದ್’ಗೆ ಬೆಂಬಲ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ನಗರದ ಪ್ರಮುಖ ಅಂಗಡಿಗಳು, ಹೊಟೇಲ್’ಗಳು ತೆರೆಯದೆ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ. ಜಿಲ್ಲೆಯ ಬಹುತೇಕ ಮುಸ್ಲಿಂ ಸಂಘಟನೆಗಳು ಬಂದ್’ಗೆ ಬೆಂಬಲ ಸೂಚಿಸಿವೆ. ಜಿಲ್ಲೆಯಲ್ಲಿನ ಕಚೇರಿಗಳು, ರೆಸ್ಟೋರೆಂಟ್’ಗಳು, ವರ್ಕ್ ಶಾಪ್, ವ್ಯಾಪಾರ ವಹಿವಾಟುಗಳಿಗೆ ಇಂದು ರಜೆ ಘೋಷಿಸಿ ಬಂದ್ ಆಚರಿಸುತ್ತಿರುವುದು ಕಂಡು ಬಂದಿದೆ.