ಬಡ ಕುಟುಂಬದ ಮಹಿಳೆಯರಿಗೆ ₹1 ಲಕ್ಷ ನೆರವು, ಸರ್ಕಾರ ಉದ್ಯೋಗದಲ್ಲಿ 50 ರಷ್ಟು ಮೀಸಲಾತಿ! ಕಾಂಗ್ರೆಸ್​ನಿಂದ​ 5 ಗ್ಯಾರಂಟಿ ಘೋಷಣೆ

ನವದೆಹಲಿ: ಲೋಕಸಭೆ ಚುನಾವಣೆಗೆ (k Sabha elections) ಇನ್ನೂ ಕೆಲವೇ ದಿನಗಳಿದೆ. ಕಾಂಗ್ರೆಸ್ (Congress) ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಹಿಳೆಯರಿಗೆ ವಿಶೇಷ ಗ್ಯಾರಂಟಿ ಯೋಜನೆ (guarantee scheme) ಘೋಷಿಸಿ ಅಧಿಕಾರ ಪಡೆದಿದೆ. ಇದೀಗ ಲೋಕಸಭೆಯಲ್ಲೂ ಗೆಲುವು ಸಾಧಿಸಲು ಹೊಸ ಯೋಜನೆಗಳನ್ನು ಘೋಷಿಸಲು ಆರಂಭಿಸಿದೆ. ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ‘ನಾರಿ ನ್ಯಾಯ’ ಗ್ಯಾರಂಟಿ (Nari Nyay) ಘೋಷಣೆ ಮಾಡಿದೆ.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬುಧವಾರ ಪ್ರಣಾಳಿಕೆ ಬಿಡುಗಡೆಗೊಳಿಸಿ ನಾರಿ ನ್ಯಾಯ ಗ್ಯಾರಂಟಿಯನ್ನು ಘೋಷಿಸಿದರು. ಈ ವೇಳೆ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಉದ್ಯೋಗಗಳನ್ನು ನೀಡಲಾಗುವುದು ಎಂದು ಹೇಳಿದರು. ಇವು ಸೇರಿ ಒಟ್ಟು 5 ಘೋಷಣೆ ಮಾಡಲಾಗಿದೆ.

ಕಾಂಗ್ರೆಸ್ ಪಕ್ಷವು ಮಹಿಳಾ ನ್ಯಾಯ ಗ್ಯಾರಂಟಿ ಅಡಿಯಲ್ಲಿ 5 ಘೋಷಣೆಗಳನ್ನು ಮಾಡಿದೆ. ಇವುಗಳಲ್ಲಿ ಮಹಾಲಕ್ಷ್ಮಿ ಗ್ಯಾರಂಟಿ, ಅರ್ಧದಷ್ಟು ಜನಸಂಖ್ಯೆ- ಪೂರ್ಣ ಹಕ್ಕು, ಶಕ್ತಿ ಕಾ ಸಮ್ಮಾನ್, ಅಧಿಕಾರ ಮೈತ್ರಿ ಮತ್ತು ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್ ಸೇರಿವೆ. ಈ ಮೊದಲು ಭಾಗೀದಾರ ನ್ಯಾಯ, ರೈತ ನ್ಯಾಯ, ಯುವ ನ್ಯಾಯ ಘೋಷಣೆ ಮಾಡಿದೆ. ಈ ಗ್ಯಾರಂಟಿ ಯೋಜನೆಗಳು ಕೇವಲ ಖಾಲಿ ಭರವಸೆಗಳು ಮತ್ತು ಹೇಳಿಕೆಗಳಲ್ಲ ನಾವು ಅವುಗಳನ್ನು ಜಾರಿ ಮಾಡೇ ಮಾಡುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ವ್ಯಂಗ್ಯವಾಡಿದ ಕಾಂಗ್ರೆಸ್ ಅಧ್ಯಕ್ಷ, 1926 ರಿಂದ ಇಲ್ಲಿಯವರೆಗೆ ಭರವಸೆಗಳನ್ನು ಈಡೇರಿಸಿದ ದಾಖಲೆ ನಮ್ಮಲ್ಲಿದೆ ಎಂದು ಹೇಳಿದರು. ನಮ್ಮ ವಿರೋಧಿಗಳು ಹುಟ್ಟುವಾಗಲೇ ನಾವು ಪ್ರಣಾಳಿಕೆಗಳನ್ನು ರೂಪಿಸಿ ಪೂರ್ಣಗೊಳಿಸುತ್ತಿದ್ದೇವೆ. ಸಾರ್ವಜನಿಕರು ಕೂಡ ನಮಗೆ ಶುಭಾಹಾರೈಸಬೇಕು. ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಆಶೀರ್ವಾದವನ್ನು ನೀಡುತ್ತಾ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಈ ಹೋರಾಟದಲ್ಲಿ ನಮ್ಮ ಕೈಯನ್ನು ಬಲಪಡಿಸಿ ಎಂದು ಖರ್ಗೆ ಹೇಳಿದರು.

Latest Indian news

Popular Stories