ಅಖಿಲೇಶ್ ಯಾದವ್ ಗೆ ದಲಿತರ ಬೆಂಬಲ ಬೇಕಿಲ್ಲ: ಭೀಮ್ ಆರ್ಮಿ ಚಂದ್ರಶೇಖರ್ ಅಝಾದ್

ಲಖನೌ: ಆಡಳಿತಾ ರೂಢ ಬಿಜೆಪಿ ಸಚಿವರಿಗೆ ಗಾಳ ಹಾಕುವ ಮೂಲಕ ಶಾಕ್ ನೀಡಿದ್ದ ಸಮಾಜವಾದಿ ಪಾರ್ಟಿಗೆ ಭೀಮ್ ಆರ್ಮಿ ಆಘಾತ ನೀಡಿದ್ದು, ಸಮಾಜವಾದಿ ಪಾರ್ಟಿಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದೆ.

ಹೌದು.. ಉತ್ತರ ಪ್ರದೇಶದಲ್ಲಿ ‌ ಚುನಾವಣಾ ರಣೋತ್ಸಾಹ, ಮೈತ್ರಿಗಳು ಗಂಟೆ ಗಂಟೆಗೂ ಬದಲಾಗುತ್ತಿದ್ದು, ಅಖಿಲೇಶ್ ಯಾದವ್‌ಗೆ ಪೂರ್ಣ ಬೆಂಬಲ ಘೋಷಿಸಿದ್ದ ಭೀಮ್ ಆರ್ಮಿ ಕೇವಲ 24 ಗಂಟೆಗಳಲ್ಲಿಯೇ ಯೂ ಟರ್ನ್‌ ತೆಗೆದುಕೊಂಡಿದೆ. ದಲಿತರನ್ನು ಅಖಿಲೇಶ್ ಯಾದವ್‌ ಕೇವಲ ವೋಟ್ ಬ್ಯಾಂಕ್ ಆಗಿ ನೋಡುತ್ತಿದ್ದಾರೆ, ಅವರನ್ನು ಚುನಾವಣಾ ಕಣದಲ್ಲಿಳಿಸಲು ಆಹ್ವಾನ ನೀಡುತ್ತಿಲ್ಲ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಶನಿವಾರ ದೂರಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ಸೋಲಿಸಲು ಒಗ್ಗಟ್ಟು ಅತ್ಯಂತ ಮುಖ್ಯ ಎಂದು ಹೇಳಿ, ಅಖಿಲೇಶ್ ಯಾದವ್‌ ನೇತೃತ್ವದ ಮೈತ್ರಿಕೂಟ ಬೆಂಬಲಿಸುವುದಾಗಿ ಹೇಳಿದ್ದರು.

ಶುಕ್ರವಾರ ಚಂದ್ರಶೇಖರ್ ಆಜಾದ್, ತಮ್ಮ ಟ್ವಿಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿದ ”ಒಗ್ಗಟ್ಟಿನಲ್ಲಿ ದೊಡ್ಡ ಶಕ್ತಿ ಇದೆ. ಬಿಜೆಪಿ ಮಾಂತ್ರಿಕ ಪಕ್ಷ. ಒಗ್ಗಟ್ಟು ಸಾಧಿಸದೆ ಆ ಪಕ್ಷವನ್ನು ಎದುರಿಸುವುದು ತುಂಬಾ ಕಷ್ಟ. ಒಟ್ಟಿನಲ್ಲಿ ಸಮುದಾಯದ ಜನರ ಘನತೆ ಕಾಪಾಡುವುದು ಮೈತ್ರಿಕೂಟ ನಾಯಕರ ಜವಾಬ್ದಾರಿ. ಈ ಕೂಟದ ಹೊಣೆ ಅಖಿಲೇಶ್ ತೆಗೆದುಕೊಳ್ಳಬೇಕೆಂದು ದಲಿತ ಸಮುದಾಯಬಯಸುತ್ತಿದೆ ”ಎಂದು ಅವರು ಟ್ವೀಟ್ ಮಾಡಿದ್ದರು.

ಆದರೆ, ಶನಿವಾರ ಬೆಳಗ್ಗೆ ತಮ್ಮ ಬೆಂಬಲ ಹಿಂಪಡೆದಿದ್ದಾರೆ. ಕಾರಣ ದಲಿತ ಸಮುದಾಯವನ್ನು ಅಖಿಲೇಶ್ ಕೇವಲ ವೋಟ್ ಬ್ಯಾಂಕ್ ಆಗಿ ನೋಡುತ್ತಿದ್ದಾರೆ ಎಂದು ಆಜಾದ್ ಟೀಕಿಸಿದ್ದಾರೆ. ‘ ಆರು ತಿಂಗಳಿನಿಂದ ‘ಅಖಿಲೇಶ್ ಯಾದವ್ ಜೊತೆ ಚುನಾವಣಾ ಮೈತ್ರಿಗಾಗಿಕಾಯುತ್ತಿದ್ದೆ. ಆದರೆ, ಅದು ಉತ್ತಮ ಫಲಿತಾಂಶ ನೀಡಲಿಲ್ಲ. ಅವರು ದಲಿತರ ನಾಯಕತ್ವ ಇಷ್ಟಪಡುವುದಿಲ್ಲ ಅವರು ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ನೋಡುತ್ತಿದ್ದಾರೆ ಎಂದು ಚಂದ್ರಶೇಖರ್ ಹೇಳಿದ್ದಾರೆ.

Latest Indian news

Popular Stories