ಇಬ್ಬರ ಮಕ್ಕಳ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಕೋಟಿ-ಕೋಟಿ ಹಣ!

ಪಟ್ನಾ: ಬಿಹಾರದ ಎರಡು ಮಕ್ಕಳ ಬ್ಯಾಂಕ್ ಖಾತೆಗಳಲ್ಲಿ ಕೋಟ್ಯಂತರ ರೂಪಾಯಿ ಜಮಾ ಆಗಿರುವುದು ಅಚ್ಚರಿಗೆ ಕಾರಣವಾಗಿದೆ.

ಕತಿಹಾರ್ ಜಿಲ್ಲೆಯಲ್ಲಿ 6 ನೇ ತರಗತಿ ವಿದ್ಯಾರ್ಥಿಗಳಾದ ಆಶಿಶ್ ಕುಮಾರ್ ಮತ್ತು ಗುರುಚರಣ್ ಬಿಸ್ವಾಸ್ ರವರ ಖಾತೆಗೆ ಸೆಪ್ಟೆಂಬರ್ 15 ರಂದು ಕ್ರಮವಾಗಿ 6,20,11,100 ಮತ್ತು 90,52,21,223 ರೂಪಾಯಿ ಜಮೆಗೊಂಡಿದೆ.

ಮಕ್ಕಳಿಬ್ಬರೂ ಬಾಗಹುರ ಪಂಚಾಯತ್‌ನ ಪಾಸ್ಟಿಯಾ ಗ್ರಾಮದವರು. ಅವರು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕಿನಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ.

ಕತಿಹಾರ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಉದಯನ್ ಮಿಶ್ರಾ ಮಕ್ಕಳು ಭಾರೀ ಮೊತ್ತವನ್ನು ಪಡೆದಿರುವುದನ್ನು ಖಚಿತಪಡಿಸಿದ್ಧಾರೆ‌.

ಎರಡು ಮಕ್ಕಳ ಖಾತೆಗಳಲ್ಲಿ ದೊಡ್ಡ ಮೊತ್ತವನ್ನು ಜಮಾ ಮಾಡಲಾಗಿದೆ. ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಮಿಶ್ರಾ ಹೇಳಿದರು.

ಇಬ್ಬರು ಮಕ್ಕಳ ಖಾತೆಗಳಲ್ಲಿ ಹಣ ಜಮಾ ಆಗುತ್ತಿದೆ ಎಂದು ತಿಳಿದ ತಕ್ಷಣ ನಾವು ಖಾತೆಗಳನ್ನು ಸ್ಥಗಿತಗೊಳಿಸಿದ್ದೇವೆ. ವ್ಯವಹಾರವನ್ನೂ ತಡೆ ಹಿಡಿದಿದ್ದೇವೆ. ಮಕ್ಕಳ ಪೋಷಕರನ್ನು ವಿಚಾರಿಸಿದಾಗ, ಹಣದ ಮೂಲವನ್ನು ಬಹಿರಂಗಪಡಿಸಲು ಅವರಿಗೆ ಸಾಧ್ಯವಾಗಿಲ್ಲ. ಈಗ ಕಳುಹಿಸಿದವರು ಯಾರು ಎಂದು ಕಂಡುಹಿಡಿಯಲು ನಾವು ಈಗ ತನಿಖೆ ಮಾಡುತ್ತಿದ್ದೇವೆ ”ಎಂದು ಎಂ.ಕೆ. ಮಧುಕರ್, ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‌ನ ಮುಖ್ಯಸ್ಥರು ತಿಳಿಸಿದ್ದಾರೆ.

ಈ ಮುಂಚೆ ರಂಜಿತ್ ದಾಸ್ ಖಾತೆಗೂ ಲಕ್ಷಾಂತರ ರೂಪಾಯಿ ಜಮೆಯಾಗಿ ಸುದ್ದಿಯಾಗಿತ್ತು.

Latest Indian news

Popular Stories