ಉಡುಪಿ:ಪರವಾನಿಗೆ ಇಲ್ಲದೆ ಪ್ರತಿಭಟನೆ; ಪಿ.ಎಫ್.ಐ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು

ಉಡುಪಿ: ಪರವಾನಿಗೆ ಇಲ್ಲದೆ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಪಿ.ಎಫ್.ಐ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ‌.

ಉಡುಪಿಯ ಡಯಾನಾ ಸರ್ಕಲ್ ಬಳಿ ಪಿ.ಎಫ್.ಐ ಕಾರ್ಯಕರ್ತರು ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯುಂಟು ಮಾಡಿದ ಆರೋಪ ಹೊರಿಸಲಾಗಿದೆ.

ಸ್ಥಳದಲ್ಲಿ 25 ರಿಂದ 30 ಜನ ಸೇರಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಪಿ.ಎಫ್.ಐ ಪ್ರಮುಖರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆದುಕೊಂಡಿರುವ ವಿಚಾರದ ಕುರಿತು ಧಿಕ್ಕಾರ ಕೂಗುತ್ತಾ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರಿಗೆ ಮತ್ತು ಸಂಚರಿಸುವ ವಾಹನಗಳಿಗೆ ಅಡೆ ತಡೆಯನ್ನು ಉಂಟು ಮಾಡುತ್ತಿದ್ದ ಕುರಿತು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರು ಸ್ಥಳದಲ್ಲಿ ಹಾಜರಿದ್ದವರಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಪರವಾನಿಗೆ ಇದೆಯೇ? ಎಂದು ವಿಚಾರಿಸಿದಾಗ ಯಾವುದೇ ಪರವಾನಿಗೆ ಇರುವುದಿಲ್ಲವಾಗಿ ತಿಳಿಸಿದ್ದು, ಅವರಿಗೆ ಸ್ಥಳದಿಂದ ಹೋಗಲು ಸೂಚನೆ ನೀಡಿದ್ದು, ಅವರುಗಳು ಸ್ಥಳದಿಂದ ಹೋಗಲು ಒಪ್ಪದಿದ್ದಾಗ ಕನಿಷ್ಟ ಬಲ ಪ್ರಯೋಗಿಸಿ ಸ್ಥಳದಿಂದ ಚದುರಿಸಲು ಪ್ರಯತ್ನಿಸಿದ್ದು, ಆದರೂ ಸಹ ಅವರುಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದುದರಿಂದ ಸಿಬ್ಬಂದಿಯವರ ಸಹಾಯದಿಂದ ಈ ಕೆಳಿಗಿನ ಆಪಾದಿತರನ್ನು ವಶಕ್ಕೆ ಪಡೆಯಲಾಗಿರುವ ಕುರಿತು ದೂರಿನಲ್ಲಿ ತಿಳಿಸಲಾಗಿದೆ.

  1) ಸಾದೀಕ್‌ ಅಹಮ್ಮದ್‌(40), 2) ಅಫ್ರೋಜ್‌ಕೆ (39), 3) ಇಲಿಯಾಸ್‌ ಸಾಹೇಬ್‌(46), 4) ಇರ್ಷಾದ್‌(37), 5) ಫಯಾಜ್‌ ಅಹಮ್ಮದ್‌(39), 6) ಮಹಮ್ಮದ್‌ ಅಶ್ರಫ್‌(43), 7) ಎ. ಹಾರೂನ್‌ ರಶೀದ್‌, 8) ಮೊಹಮ್ಮದ್‌ ಜುರೈಜ್‌ (42), 9) ಇಶಾಕ್‌ ಕಿದ್ವಾಯಿ  (30), 10) ಶೌಕತ್‌ಅಲಿ (31), 11) ಮಹಮ್ಮದ್‌ ಝಹೀದ್‌(24) ಇವರನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 145/2022 ಕಲಂ:  143 147 290 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    

Latest Indian news

Popular Stories